ಶ್ರೀನಗರ, ಫೆ.21 (DaijiworldNews/MB) : ಶ್ರೀನಗರದ ಡಾಲ್ಗೇಟ್ ಬಳಿಯ ಕೃಷ್ಣಾ ಢಾಬಾ ಮೇಲಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸಿದ್ದು ಅನಂತ್ನಾಗ್ ಕಾಡಿನಲ್ಲಿ ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಿ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಕೃಷ್ಣಾ ಢಾಬಾ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಶಂಕಿತ ಉಗ್ರನನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಭದ್ರತಾಪಡೆ ಕಾರ್ಯಾಚರಣೆ ನಡೆಸಿ ಉಗ್ರರ ಅಡಗುತಾಣವನ್ನು ಪತ್ತೆ ಹಚ್ಚಿದ್ದಾರೆ. ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ವೇಳೆ ಮೂರು ಎಕೆ -56 ರೈಫಲ್ಗಳು, ಎರಡು ಚೈನೀಸ್ ಪಿಸ್ತೂಲ್ಗಳು, ಎರಡು ಚೀನೀ ಗ್ರೆನೇಡ್ಗಳು, ಒಂದು ಟೆಲಿಸ್ಕೋಪ್, ಆರು ಎಕೆ ಮ್ಯಾಗಜಿನ್ ಗಳು, ಎರಡು ಪಿಸ್ತೂಲ್ ಮ್ಯಾಗಜಿನ್ ಗಳು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಉಗ್ರರು ಶ್ರೀನಗರದ ದುರ್ಗಾನಾಗ್ ಡಾಲ್ಗೇಟ್ ಪ್ರದೇಶದಲ್ಲಿ ಢಾಬಾ ಮಾಲೀಕ ಮತ್ತು ಆತನ ಪುತ್ರನ ಮೇಲೆ ಗುಂಡು ಹಾರಿಸಿದ್ದರು. ಈ ಸಂದರ್ಭ ಢಾಬಾ ಮಾಲೀಕರ 22 ವರ್ಷದ ಮಗ ತೀವ್ರವಾಗಿ ಗಾಯಗೊಂಡಿದ್ದು ಯುವಕನನ್ನುಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರಸ್ತುತ ಆತನ ಸ್ಥಿತಿ ಸ್ಥಿರವಾಗಿದೆ.
ಇನ್ನು ಈ ದಾಳಿಯ ಹೊಣೆಯನ್ನು ನಿಷೇಧಿತ ಭಯೋತ್ಪಾದಕ ಸಂಘಟನೆಯಾದ 90 ರ ದಶಕದ ಆರಂಭದಲ್ಲಿ ಕಾಶ್ಮೀರದಲ್ಲಿ ಸಕ್ರಿಯವಾಗಿದ್ದ 'ಮುಸ್ಲಿಂ ಜನ್ಬಾಜ್ ಫೋರ್ಸ್' ನ ಹೊತ್ತಿತ್ತು.