ನವದೆಹಲಿ, ಫೆ. 20 (DaijiworldNews/HR): "ಇಂಧನ ಬೆಲೆ ಏರಿಕೆಯು ಬೇಸರದ ಸಂಗತಿಯಾಗಿದ್ದು, ಮುಂದಿನ ದಿನಗಳಲ್ಲಿ ಇಂಧನ ಬೆಲೆ ಕುಸಿತವೇ ಇದಕ್ಕೆ ಉತ್ತರವಾಗಬೇಕಿದ್ದು, ಇದನ್ನು ಹೊರತುಪಡಿಸಿ ಬೇರೆ ಏನು ಹೇಳಿದರೂ, ಯಾರಿಗೂ ಮನವರಿಕೆಯಾಗುವುದಿಲ್ಲ" ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, "ಗ್ರಾಹಕರಿಗೆ ಚಿಲ್ಲರೆ ಇಂಧನವನ್ನು ಯೋಗ್ಯ ಬೆಲೆಯಲ್ಲಿ ಒದಗಿಸುವ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚರ್ಚೆ ನಡೆಸಬೇಕಿದೆ" ಎಂದರು.
ಇನ್ನು ಪೆಟ್ರೋಲ್, ಡಿಸೇಲ್ ಬೆಲೆಯು ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಶನಿವಾರ ತೈಲೋತ್ಪನ್ನಗಳ ಬೆಲೆಯಲ್ಲಿ 37 ರಿಂದ 39 ಪೈಸೆಯಷ್ಟು ಹೆಚ್ಚಳವಾಗಿದೆ.