ನವದೆಹಲಿ, ಫೆ. 20 (DaijiworldNews/HR): ಟೂಲ್ ಕಿಟ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರಿನ ಹವಾಮಾನ ಕಾರ್ಯಕರ್ತೆ 22 ವರ್ಷ ದಿಶಾ ರವಿ ಅವರ ಜಾಮೀನು ಅರ್ಜಿ ವಿಚಾರಣೆ ನಡೆಸಿದ ದೆಹಲಿ ನ್ಯಾಯಾಲಯ ಫೆಬ್ರವರಿ 23ಕ್ಕೆ ಆದೇಶವನ್ನು ಕಾಯ್ದಿರಿಸಿದೆ ಎನ್ನಲಾಗಿದೆ.
ಟೂಲ್ ಕಿಟ್ ಪ್ರಕರಣದ ಕುರಿತು 3 ಗಂಟೆಗಳ ಸುದೀರ್ಘ ವಿಚಾರಣೆಯ ಬಳಿಕ ಪಟಿಯಾಲ ಹೌಸ್ ಕೋರ್ಟ್ಗಳ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಧರ್ಮೇಂದರ್ ರಾಣಾ ಅವರು, ಜಾಮೀನು ಅರ್ಜಿಯ ತೀರ್ಪನ್ನು ಫೆಬ್ರವರಿ 23ಕ್ಕೆ ಕಾಯ್ದಿರಿಸಿದ್ದಾರೆ.