ಮುಂಬೈ, ಫೆ. 20 (DaijiworldNews/HR): ನಟ ವಿವೇಕ್ ಒಬೆರಾಯ್ ಅವರು ಪತ್ನಿ ಜೊತೆ ಔಟಿಂಗ್ ಹೋಗುವಾಗ ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದ್ದಕ್ಕೆ ಅವರ ವಿರುದ್ಧ ಪ್ರಕರಣ ದಾಖಲಾಗಿ ದಂಡ ವಿಧಿಸಲಾಗಿದೆ ಎಂದು ತಿಳಿದು ಬಂದಿದೆ.
ವಿವೇಕ್ ಒಬೆರಾಯ್ ಪತ್ನಿ ಜೊತೆ ಔಟಿಂಗ್ ಹೋಗಿದ್ದ ವೀಡಿಯೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಈ ವೀಡಿಯೋ ವೈರಲ್ ಆಗಿದ್ದು, ಹೆಲ್ಮೆಟ್ ಹಾಗೂ ಮಾಸ್ಕ್ ಹಾಕದಿರುವುದು ಕಂಡುಬಂದಿದ್ದು, ದಂಡ ವಿಧಿಸಲಾಗಿದೆ.
ಕೊರೊನಾ ಸಮಯದಲ್ಲಿ ಮಾಸ್ಕ್ ಧರಿಸದೇ ಸಂಚರಿಸಿದ್ದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಇದರಿಂದಾಗಿ ಯುವಕರನ್ನು ತಪ್ಪು ದಾರಿಗೆ ಎಳೆಯಲು ಪ್ರೋತ್ಸಾಹಿಸಿದಂತಾಗುತ್ತದೆ. ಹೀಗಾಗಿ ಇದನ್ನು ಗಮನಿಸಿದ ಮುಂಬೈ ಪೊಲೀಸರು ಕ್ರಮ ಕೈಗೊಂಡಿದ್ದು, ಇ-ಚಲನ್ ನೀಡುವ ಮೂಲಕ ದಂಡ ಹಾಕಿದ್ದಾರೆ.
ಇನ್ನು ಹೆಲ್ಮೆಟ್ ಧರಿಸದ್ದಕ್ಕೆ ವಿವೇಕ್ ಒಬೆರಾಯ್ ಅವರಿಗೆ 500 ರೂ.ಗಳ ದಂಡದ ಇ-ಚಲನ್ನ್ನು ಸ್ಯಾಂತಾಕ್ರೂಜ್ ವಿಭಾಗದ ಪೊಲೀಸರು ನೀಡಿದ್ದು, ಮಾಸ್ಕ್ ಧರಿಸದ್ದಕ್ಕೆ ಮುಂಬೈನ ಜುಹು ಪೊಲೀಸ್ ಠಾಣೆಯಲ್ಲಿ ಫೆಬ್ರವರಿ 19ರಂದು ಎಫ್ಐಆರ್ ಕೂಡ ದಾಖಲಾಗಿದೆ.