ನವದೆಹಲಿ, ಫೆ.19 (DaijiworldNews/PY): ಭೂಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರು ಅತ್ಯಾಧುನಿಕ ಕೆ-9 ವಜ್ರ ಹೊವಿಟ್ಜರ್ ತೋಪುಗಳ ಪೈಕಿ ನೂರನೇ ತೋಪನ್ನುಸೇನಾ ಸೇವೆಗೆ ಸಮರ್ಪಿಸಿದ್ದಾರೆ.
100 ಕೆ-9 ವಜ್ರ ಹೊವಿಟ್ಜರ್ಗಳಿಗೆ ಸೇನೆಯು ಬೇಡಿಕೆ ಸಲ್ಲಿಸಿತ್ತು. ಇದರಲ್ಲಿ ಮೂರನ್ನು ಲಡಾಖ್ನ ಗರಿಷ್ಠ ಎತ್ತರದಲ್ಲಿ ಪರೀಕ್ಷೆಗಾಗಿ ನಿಯೋಜನೆ ಮಾಡಲಾಗಿದೆ.
ಮಂಗಳವಾರದಂದು ಮೂರು ಹೊವಿಟ್ಜರ್ಗಳು ಲಡಾಖ್ಗೆ ಆಗಮಿಸಿದ್ದು, ಗರಿಷ್ಠ ಎತ್ತರದ ಸ್ಥಳಗಲ್ಲಿ ಅವುಗಳ ಕಾರ್ಯಾಚರಣೆಯ ಸಾಮರ್ಥ್ಯ ತಿಳಿಯುವ ಸಲುವಾಗಿ ಕೊಂಡೊಯ್ಯಲಾಗುತ್ತದೆ ಎಂದು ಸೇನಾ ಮೂಲಗಳು ಹೇಳಿವೆ.