ಜಮ್ಮು, ಫೆ.19 (DaijiworldNews/MB) : ಉಗ್ರರ ವಿರುದ್ದ ಕಾರ್ಯಾಚರಣೆ ನಡೆಸುವ ಸಂದರ್ಭದಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿರುವ ಘಟನೆ ಜಮ್ಮು-ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಬೀರ್ವಾ ಪ್ರದೇಶದಲ್ಲಿ ನಡೆದಿದೆ.
ಹುತಾತ್ಮ ಪೊಲೀಸ್ ಸಿಬ್ಬಂದಿ ಬುದ್ಗಾಮ್ನ ಎಸ್ಪಿಒ ಮೊಹಮ್ಮದ್ ಅಲ್ತಾಫ್.
ಇನ್ನು ಕಾರ್ಯಾಚರಣೆ ಸಂದರ್ಭ ಮತ್ತೊಬ್ಬ ಪೊಲೀಸ್ ಸಿಬ್ಬಂದಿ ಮನ್ಸೂರ್ ಅಹ್ಮದ್ ಅವರಿಗೆ ಗಾಯವಾಗಿದೆ ಎಂದು ವರದಿಯಾಗಿದೆ.
ಪ್ರಸ್ತುತ ಉಗ್ರರ ವಿರುದ್ದದ ಈ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ತಿಳಿದು ಬಂದಿದೆ.