ಬೆಂಗಳೂರು, ಫೆ.19 (DaijiworldNews/HR): ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಫೆಬ್ರವರಿ ತಿಂಗಳ ಕೊನೆಯಲ್ಲಿ ಐದು ಹೊಸ ಮಾರ್ಗಗಳಿಗೆ ವಿಮಾನಯಾನ ಸೇವೆ ಆರಂಭವಾಗಲಿದೆ.
ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಆಗ್ರಾ, ಕರ್ನೂಲು, ರಾಜಕೋಟ್, ದುರ್ಗಾಪುರ ಮತ್ತು ದಿಬ್ರುಗಡಕ್ಕೆ ಹೊಸದಾಗಿ ವಿಮಾನಗಳು ಸಂಚರಿಸಲಿದ್ದು, ರಾಜಕೋಟ್, ದುರ್ಗಾಪುರಕ್ಕೆ ಸ್ಪೈಸ್ಜೆಟ್ ಮತ್ತು ದಿಬ್ರುಗಡಕ್ಕೆ ಇಂಡಿಗೊ ವಿಮಾನಗಳು ಫೆಬ್ರವರಿ ತಿಂಗಳ ಕೊನೆಯಲ್ಲಿ ಸಂಚಾರ ಆರಂಭಿಸಲಿವೆ ಎಂದು ತಿಳಿದು ಬಂದಿದೆ.
ಇನ್ನು ಆಗ್ರಾ ಮತ್ತು ಕರ್ನೂಲ್ಗೆ ಮಾರ್ಚ್ ಮೊದಲ ವಾರದಿಂದ ವಿಮಾನ ಸೇವೆ ಲಭ್ಯವಾಗಲಿದೆ ಎಂದು ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆ ತಿಳಿಸಿದ್ದು, ನಗರದಿಂದ ಭಾರತದ 61 ಸ್ಥಳಗಳಿಗೆ ವಿಮಾನಯಾನ ಸೇವೆ ಸಿಕ್ಕಂತಾಗಲಿದೆ.