ನವದೆಹಲಿ, ಫೆ.19 (DaijiworldNews/MB) : ದೇಶಾದ್ಯಂತ ಹೆಚ್ಚುತ್ತಿರುವ ಇಂಧನ ಬೆಲೆಗಳ ಮಧ್ಯೆ, ಛತ್ತೀಸ್ಗಢದಲ್ಲಿ ಇತರ ನೆರೆಯ ರಾಜ್ಯಗಳಿಗೆ ಹೋಲಿಸಿದರೆ ಪೆಟ್ರೋಲ್ ಲೀಟರ್ಗೆ 12 ರೂ ಮತ್ತು ಡೀಸೆಲ್ ಲೀಟರ್ಗೆ 4 ರೂ. ಕಡಿಮೆಯಿದೆ.
ನೆರೆಯ ರಾಜ್ಯಗಳಿಗಿಂತ ವ್ಯಾಟ್ ದರ ಕಡಿಮೆ ಮಾಡುವ ಸರ್ಕಾರದ ನಿರ್ಧಾರವೇ ಇದಕ್ಕೆ ಕಾರಣ ಎಂದು ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಹೇಳುತ್ತಾರೆ.
ಪ್ರಸ್ತುತ, ಛತ್ತೀಸ್ಗಢದಲ್ಲಿ ಸಾರಿಗೆ ಇಂಧನಗಳ ವ್ಯಾಟ್ ದರವು ಪೆಟ್ರೋಲ್ಗೆ ಶೇಕಡಾ 25 ಅಂದರೆ 2 ರೂ., ಡೀಸೆಲ್ಗೆ ಪ್ರತಿ ಲೀಟರ್ಗೆ 25 ಪ್ರತಿಶತ ಅಂದರೆ 1 ರೂ. ಆಗಿದೆ.
ರಾಯಪುರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 87.28 ರೂ. ಮತ್ತು ಡೀಸೆಲ್ ಬೆಲೆ 85.66 ರೂ. ಆಗಿದೆ. ಮಹಾರಾಷ್ಟ್ರದ ಗೊಂಡಿಯಾ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.07 ಮತ್ತು ಡೀಸೆಲ್ ಬೆಲೆ ಲೀಟರ್ಗೆ 86.31 ರೂ. ಇದೆ. ಅಂತೆಯೇ ಮಧ್ಯಪ್ರದೇಶದ ಬಾಲಘಾಟ್ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 99.07 ಮತ್ತು ಡೀಸೆಲ್ ಬೆಲೆ ಲೀಟರ್ಗೆ 89.55 ರೂ. ಇದೆ. ಉತ್ತರ ಪ್ರದೇಶದ ಸೋನಭದ್ರ ಜಿಲ್ಲೆಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 87.76 ರೂ., ಡೀಸೆಲ್ ಬೆಲೆ ಲೀಟರ್ಗೆ 84.24 ರೂ. ಆಗಿದೆ.
ಜಾರ್ಖಂಡ್ನ ಸಿಮ್ಡೆಗಾದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 87.81 ರೂ. ಮತ್ತು ಡೀಸೆಲ್ ಬೆಲೆ ಲೀಟರ್ಗೆ 85.19 ರೂ. ಇದೆ. ಒಡಿಶಾದ ಬಾರ್ಘರ್ನಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 90.64 ರೂ., ಡೀಸೆಲ್ ಬೆಲೆ ಲೀಟರ್ಗೆ 87.34 ರೂ. ಇದೆ.
ಪೆಟ್ರೋಲ್ನ ಮೂಲ ಬೆಲೆ ಪ್ರತಿ ಲೀಟರ್ಗೆ 19.48 ರೂ. ಆಗಿದ್ದು ಇದರ ಮೇಲೆ ಕೇಂದ್ರ ಸರ್ಕಾರವು 31.98 ರೂ.ಗಳ ಕೇಂದ್ರ ಅಬಕಾರಿ ವಿಧಿಸಿದರೆ, ಛತ್ತೀಸ್ಗಢ ಸರ್ಕಾರವು 15.11 ರೂ.ಗಳ ವ್ಯಾಟ್ ವಿಧಿಸುತ್ತದೆ.
ಅಂತೆಯೇ, ಡೀಸೆಲ್ನ ಮೂಲ ಬೆಲೆ 28.66 ರೂ., ಅದರ ಮೇಲೆ ಕೇಂದ್ರ ಅಬಕಾರಿ 31.83 ರೂ.ಗಳನ್ನು ವಿಧಿಸಿದರೆ, ಛತ್ತೀಸ್ಗಢ ಸರ್ಕಾರವು ಕೇವಲ 16.12 ರೂ.ಗಳನ್ನು ವ್ಯಾಟ್ ವಿಧಿಸುತ್ತದೆ.