ನವದೆಹಲಿ,ಫೆ.19 (DaijiworldNews/HR): ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ ಹತರಾಗಿರುವ ಸೈನಿಕರ ಹೆಸರುಗಳನ್ನು ಕೊನೆಗೂ ಚೀನಾ ಬಹಿರಂಗಪಡಿಸಿದೆ ಎಂದು ತಿಳಿದು ಬಂದಿದೆ.
ಗಾಲ್ವಾನ್ ಕಣಿವೆ
ಈ ಕುರಿತು ಚೀನಾ ಮಾಧ್ಯಮಗಳಿಂದಲೇ ವರದಿಯಾಗಿದ್ದು, ಗಾಲ್ವಾನ್ ಘರ್ಷಣೆಯಲ್ಲಿ ಪ್ರಾಣ ತ್ಯಾಗ ಮಾಡಿದ ಸೈನಿಕರಿಗೆ ಅಲ್ಲಿನ ಸರ್ಕಾರ ಶೌರ್ಯ ಪ್ರಶಸ್ತಿ ನೀಡಲು ಮುಂದಾಗಿದೆ ಎನ್ನಲಾಗಿದೆ.
ಗಾಲ್ವಾನ್ ಕಣಿವೆಯ ವಾಸ್ತವ ಗಡಿ ನಿಯಂತ್ರಣಾ ರೇಖೆ (ಎಲ್ಎಸಿ) ಬಳಿ ಕಳೆದ ವರ್ಷ ಭಾರತೀಯ ಸೇನೆ ಹಾಗೂ ಚೀನಾದ ಪೀಪಲ್ ಲಿಬರೇಷನ್ ಆರ್ಮಿ (ಪಿಎಲ್ಎ) ನಡುವೆ ಕಾಳಗ ನಡೆದಿದ್ದು, ಗಾಲ್ವಾನ್ ಘರ್ಷಣೆಯಲ್ಲಿ ಹತರಾದ ಸೈನಿಕರ ವಿವರಗಳನ್ನು ಬಹಿರಂಗಪಡಿಸಲು ಚೀನಾ ನಿರಾಕರಿಸಿತ್ತು. ಅಲ್ಲದೆ ಯಾವುದೇ ಸೈನಿಕರು ಹತರಾಗಿಲ್ಲ ಎಂಬ ವಾದವನ್ನು ಕೂಡ ಪದೇ ಪದೇ ಮಂಡಿಸಿತ್ತು ಎನ್ನಲಾಗಿದೆ.
ಇನ್ನು ಗಾಲ್ವಾನ್ ಘರ್ಷಣೆಯಲ್ಲಿ ಪ್ರಾಣ ಕಳೆದುಕೊಂಡ ನಾಲ್ವರು ಸೈನಿಕರಿಗೆ ಚೀನಾದ ಸೆಂಟ್ರಲ್ ಮಿಲಿಟರಿ ಕಮಿಷನ್, ಶೌರ್ಯ ಪ್ರಶಸ್ತಿ ನೀಡುವುದಾಗಿ ಘೋಷಿಸಿದೆ. ಇದರೊಂದಿಗೆ ಚೀನಾ ಮುಚ್ಚಿಟ್ಟ ಸತ್ಯ ಬಹಿರಂಗವಾಗಿದೆ.