ನವದೆಹಲಿ, ಫೆ.19 (DaijiworldNews/HR): ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಉಂಟು ಮಾಡಿದೆ. ಸತತ 11ನೇ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡಿದ್ದು, ಶುಕ್ರವಾರ ಮತ್ತೆ ಪೆಟ್ರೋಲ್ ದರ 31 ಪೈಸೆ, ಡೀಸೆಲ್ ದರ 33 ಪೈಸೆಯಷ್ಟು ಏರಿಕೆಯಾಗಿದೆ.
ಶುಕ್ರವಾರದಂದು ದೇಶದ ಎಲ್ಲಾ ಮೆಟ್ರೊ ನಗರಗಳಲ್ಲಿ ಪೆಟ್ರೋಲ್ ದರ 90 ರೂಪಾಯಿ ಗಡಿ ದಾಟಿದ್ದು, ಡೀಸೆಲ್ ದರ ಕೂಡ ಲೀಟರ್ ಗೆ 80 ರೂಪಾಯಿ ದಾಟಿದೆ ಎನ್ನಲಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು ಪೆಟ್ರೋಲ್ ಬೆಲೆ ಲೀಟರ್ಗೆ 93 ರೂಪಾಯಿ 21 ಪೈಸೆ, ಡೀಸೆಲ್ ದರ ಲೀಟರ್ಗೆ 85 ರೂಪಾಯಿ 44 ಪೈಸೆಯಾಗಿದೆ.
ಒಂದೆಡೆ ಅಡುಗೆ ಅನಿಲ ದರ ಏರಿಕೆ, ಮತ್ತೊಂದೆಡೆ ಪೆಟ್ರೋಲ್, ಡೀಸೆಲ್ ಏರಿಕೆ ಇವೆರಡು ಸೇರಿ ಇತರೆ ಬೆಲೆ ಏರಿಕೆಗಳನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ.