ಬೆಂಗಳೂರು, ಫೆ.18 (DaijiworldNews/PY): "ವಿಜಯೇಂದ್ರ ಅವರು, ಬಿಹಾರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ತಮ್ಮ ಆಪ್ತರ ಮುಖಾಂತರ ಎಷ್ಟು ಹಣ ಕಳುಹಿಸಿದ್ದಾರೆ" ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆರೋಪಿಸಿದ್ದಾರೆ.
"ವಿಜಯೇಂದ್ರ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ಶಕ್ತಿ ಕುಗ್ಗಿಸಲುಬಿಹಾರ ಚುನಾವಣೆಗೆ ಫಡಿಂಗ್ ಮಾಡಿದ್ದಾರೆ. ಈ ವಿಚಾರದ ಬಗ್ಗೆ ತನಿಖೆಯಾಗಬೇಕು" ಎಂದಿದ್ದಾರೆ.
"ವಿಜಯೇಂದ್ರ ಅವರು ಮಾರಿಷಸ್ಗೆ ಏಕೆ ಹೋದರು?. ಯಾವ ವಿಮಾನದಲ್ಲಿ ಮಾರಿಷಸ್ಗೆ ಹೋಗಿದ್ದರು?. ಆ ವಿಮಾನದ ನಂಬರ್ ಅನ್ನು ಕೂಡಾ ನಮೂದಿಸಿದ್ದೇನೆ. ಮಾರಿಷಸ್ಗೆ ಎಷ್ಟು ಜನ ಹೋಗಿದ್ದರು ಎನ್ನುವುದನ್ನು ಕೂಡಾ ಪತ್ರದಲ್ಲಿ ಬರೆದಿದ್ದೇನೆ" ಎಂದು ತಿಳಿಸಿದ್ದಾರೆ.
"ಭ್ರಷ್ಟಾಚಾರ ಸೇರಿದಂತೆ ಹಸ್ತಕ್ಷೇಪ, ವರ್ಗಾವಣೆ ದಂಧೆ ವಿಚಾರದ ಬಗ್ಗೆಯೂ ತನಿಖೆಯಾಗಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದೇನೆ. ನೋಟಿಸ್ಗೆ ಉತ್ತರ ಕೊಡುವಾಗ ಪತ್ರದಲ್ಲಿ ಎಲ್ಲಿಯೂ ಕ್ಷಮೆ ಕೇಳಿಲ್ಲ. ಮಾಧ್ಯಮದವರ ಮುಂದೆ, ಪ್ರತಿ ಪ್ಯಾರಾದ ಬಗ್ಗೆ ಹಂತ ಹಂತವಾಗಿ ಹೇಳುತ್ತೇನೆ" ಎಂದಿದ್ದಾರೆ.
"ಸುಪ್ರೀಂ ಕೋರ್ಟ್ ಆದೇಶಕ್ಕೆ ಸಿದ್ದರಾಮಯ್ಯ ಅಪಚಾರ ಮಾಡಿದ್ದಾರೆ. ಶ್ರೀರಾಮ ಮಂದಿರದ ಬಗ್ಗೆ ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಅವರ ಹೇಳಿಕೆಯ ಬಗ್ಗೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಲಾಗುವುದು. ಮುಸ್ಲಿಂ ಓಟ್ಗಾಗಿ ಅವರು ಈ ರೀತಿಯಾಗಿ ಮಾತನಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.