ಮಂಡ್ಯ, ಫೆ.18 (DaijiworldNews/MB) : ''ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ನನ್ನ ಅಂತ್ಯಕ್ರಿಯೆಗೆ ಬರಬೇಕು'' ಎಂದು ಡೆತ್ ನೋಟ್ ಬರೆದಿಟ್ಟು ತಾಲೂಕಿನ ಕೋಡಿದೊಡ್ಡಿ ಗ್ರಾಮದ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ನಡೆದಿರುವ ಬಗ್ಗೆ ವರದಿಯಾಗಿದೆ.
ಗ್ರಾಮದ ಯುವಕ ರಾಮಕೃಷ್ಣ ಎಂಬಾತ ಡೆತ್ ನೋಟ್ ಬರೆದಿಟ್ಟು ಅತ್ಮಹತ್ಯೆ ಮಾಡಿಕೊಂಡವ.
ಡೆತ್ನೋಟ್ನಲ್ಲಿ ಆತ, ''ನಾನೆಲ್ಲರಿಗೂ ನೋವು ನೀಡಿದ್ದೇನೆ, ಅಮ್ಮನಿಗೆ ಒಳ್ಳೆಯ ಮಗನಾಗಲಿಲ್ಲ. ಅಣ್ಣನಿಗೆ ತಮ್ಮನಾಗಲಿಲ್ಲ. ಸ್ನೇಹಿತರಿಗೆ ಒಳ್ಳೆಯ ಗೆಳೆಯನಾಗಲಿಲ್ಲ. ನನ್ನ ಹುಡುಗಿಗೂ ಒಳ್ಳೆಯ ಸಂಗಾತಿ ಆಗಲಿಲ್ಲ. ಆ ಹಿನ್ನೆಲೆ ನಾನು ನಿಮ್ಮನ್ನು ಬಿಟ್ಟು ದೂರ ತೆರಳುತ್ತಿದ್ದೇನೆ. ನನ್ನನ್ನು ಎಲ್ಲರೂ ಕ್ಷಮಿಸಿ'' ಎಂದು ಬರೆದಿದ್ದು, ತನ್ನ ಅಂತ್ಯಕ್ರಿಯೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ನಟ ಯಶ್ ಬರೆಬೇಕೆಂದು ಕೂಡಾ ಉಲ್ಲೇಖಿಸಿದ್ದಾರೆ.
ಇನ್ನು ಈ ಹಿನ್ನೆಲೆ ಮೃತ ವ್ಯಕ್ತಿಯ ಕೋರಿಕೆ ಈಡೇರಿಸಲು ಸಿದ್ದರಾಮಯ್ಯ ಇಂದು ಕೋಡಿದೊಡ್ಡಿ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿಯಾಗಿದೆ.
ಈ ಬಗ್ಗೆ ಕೆರಗೋಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.