ನವದೆಹಲಿ, ಫೆ.18 (DaijiworldNews/MB) : ದಿನದಿಂದ ದಿನಕ್ಕೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಉಂಟು ಮಾಡಿದೆ. ಸತತ 10 ದಿನ ಪೆಟ್ರೋಲ್, ಡೀಸೆಲ್ ದರ ಏರಿಕೆ ಕಂಡಿದೆ. ಗುರುವಾರ ಮತ್ತೆ ಪೆಟ್ರೋಲ್ ದರ 34 ಪೈಸೆ, ಡೀಸೆಲ್ ದರ 32 ಪೈಸೆಯಷ್ಟು ಏರಿಕೆಯಾಗಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಲೀಟರ್ಗೆ 92 ರೂಪಾಯಿ 54 ಪೈಸೆ, ಡೀಸೆಲ್ ಬೆಲೆ 85 ರೂಪಾಯಿ 07 ಪೈಸೆಯಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 89 ರೂಪಾಯಿ 88 ಪೈಸೆಯಷ್ಟಿದೆ.
ಬುಧವಾರ ಪೆಟ್ರೋಲ್, ಡೀಸೆಲ್ ಬೆಲೆಯ ಸತತ ಏರಿಕೆಯ ಒಂಬತ್ತನೇ ದಿನ ದೆಹಲಿಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಪ್ರತಿ ಲೀಟರ್ಗೆ 25 ಪೈಸೆ ಹೆಚ್ಚಳವಾಗಿತ್ತು.
ಒಂದೆಡೆ ಅಡುಗೆ ಅನಿಲ ದರ ಏರಿಕೆ, ಮತ್ತೊಂದೆಡೆ ಪೆಟ್ರೋಲ್, ಡೀಸೆಲ್ ಏರಿಕೆ ಇವೆರಡು ಸೇರಿ ಇತರೆ ಬೆಲೆ ಏರಿಕೆಗಳನ್ನೇ ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಬಿಜೆಪಿಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಿದೆ.