ಬೆಂಗಳೂರು, ಫೆ.18 (DaijiworldNews/MB) : ಕಾಂಗ್ರೆಸ್ ಪಕ್ಷದವರಿಗೆ ಕೃಷಿ ಜ್ಞಾನವಿಲ್ಲ ಎಂದು ಹೇಳಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರ ವಿರುದ್ದ ಕಾಂಗ್ರೆಸ್ ವಕ್ತಾರ ದಿನೇಶ್ ಗುಂಡೂರಾವ್ ಅವರು ಕಿಡಿಕಾರಿದ್ದು, ''ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಮ್ಮ ಪಕ್ಷದವರ ಕೃಷಿ ಜ್ಞಾನದ ಬಗ್ಗೆಯೂ ಮಾತಾಡಲಿ'' ಎಂದು ಟಾಂಗ್ ನೀಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಕಾಂಗ್ರೆಸ್ ನಾಯಕರ ಕೃಷಿ ಜ್ಞಾನದ ಬಗ್ಗೆ ಮಾತಾಡಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಮ್ಮ ಪಕ್ಷದವರ ಕೃಷಿ ಜ್ಞಾನದ ಬಗ್ಗೆಯೂ ಮಾತಾಡಲಿ. ಬಿಜೆಪಿ ನಾಯಕರು ಧರ್ಮದ ಹೆಸರಲ್ಲಿ ಸಮಾಜ ಒಡೆಯುವ ಕೆಲಸ ಬಿಟ್ಟು ಯಾವಾತ್ತಾದರೂ ಹೊಲ ಊಳಿದ್ದಾರಾ? ಕಳೆ ಕಿತ್ತಿದ್ದಾರಾ?. ರೈತರಾದವರೂ ಮಾತ್ರ ರೈತರ ಬಗ್ಗೆ ಮಾತನಾಡಬೇಕು'' ಎಂಬ ಶಾಸನವೇನಿಲ್ಲ ಎಂದು ಹೇಳಿದ್ದಾರೆ.
''ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ತಮ್ಮ ತವರು ರಾಜ್ಯ ಉ.ಪ್ರದೇಶದಲ್ಲಿ ನಡೆಯುತ್ತಿರುವ ರೈತರ ಖಾಪ್ ಪಂಚಾಯಿತಿಯಲ್ಲಿ ಒಮ್ಮೆ ಭಾಗವಹಿಸಲಿ. ಅಲ್ಲಿಯ ರೈತರೇ ಇವರ ನಕಲಿ ರೈತ ಪ್ರೇಮದ ಮುಖವಾಡ ಕಳಚಲಿದ್ದಾರೆ. ಬಿಜೆಪಿ ಪಕ್ಷಕ್ಕೆ ನಿಜವಾದ ರೈತರ ಕಾಳಜಿಯಿದ್ದಿದ್ದರೆ ರೈತರು ಇವರ ವಿರುದ್ಧ ಬೀದಿಗೆ ಬಂದಿರುವುದ್ಯಾಕೆ ಎಂದು ಅರುಣ್ ಸಿಂಗ್ ಉತ್ತರಿಸಲಿ'' ಎಂದಿದ್ದಾರೆ.