ನವದೆಹಲಿ, ಫೆ.17 (DaijiworldNrews/HR): "ಭಾರತದಾದ್ಯಂತ ಏಕರೂಪದ ದರ ಹಾಗೂ ಕಡಿಮೆ ಬೆಲೆಯಲ್ಲಿ ದೊರೆಯುವಂತೆ ಮಾಡಲು ನೈಸರ್ಗಿಕ ಅನಿಲವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರಲು ಭಾರತ ಬದ್ಧವಾಗಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ತಮಿಳುನಾಡಿನಲ್ಲಿ ಹಮ್ಮಿಕೊಳ್ಳಲಾಗಿರುವ ತೈಲ ಮತ್ತು ಅನಿಲ ಯೋಜನೆಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, "ಭಾರತವು ತೈಲ ಮತ್ತು ಅನಿಲ ಮೂಲಸೌಕರ್ಯ ನಿರ್ಮಾಣಕ್ಕೆ 5 ವರ್ಷಗಳಿಗೆ 7.5 ಲಕ್ಷ ಕೋಟಿ ವ್ಯಯಿಸುತ್ತಿದೆ" ಎಂದರು.
ಇನ್ನು "ಹಿಂದಿನ ಸರ್ಕಾರಗಳು ದೇಶದ ಇಂಧನ ಆಮದು ಅವಲಂಬನೆಯನ್ನು ಕಡಿಮೆ ಮಾಡುವತ್ತ ಗಮನಹರಿಸಿದ್ದರೆ ಈಗ ಮಧ್ಯಮ ವರ್ಗದವರಿಗೆ ಹೊರೆಯಾಗುತ್ತಿರಲಿಲ್ಲ" ಎಂದೂ ಮೋದಿ ಹೇಳಿದ್ದಾರೆ.