ಹುಬ್ಬಳ್ಳಿ, ಫೆ.17 (DaijiworldNrews/HR): ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮೀಸಲಾತಿ ನೀಡಿಕೆಯ ಅಧಿಕಾರ ಇಲ್ಲದಿದ್ದರೂ, ದಿನಕ್ಕೊಂದು ಹೇಳಿಕೆ ನೀಡುತ್ತಿದ್ದಾರೆ, ಈ ಪರಿಸ್ಥಿತಿ ನಿಭಾಯಿಸುವುದು ಅವರಿಗೆ ಕಷ್ಟವಾಗಿದೆ ಎಂದು ವಿಧಾನಪರಿಷತ್ತು ಮಾಜಿ ಸದಸ್ಯ ಕೆ.ಸಿ.ಪುಟ್ಟಸಿದ್ಧ ಶೆಟ್ಟಿ ಹೇಳಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಯಡಿಯೂರಪ್ಪ ಅವರಿಗೆ ಮೀಸಲಾತಿ ನೀಡುವ ಕಾಳಜಿ ಇದ್ದರೆ ಮೀಸಲಾತಿ ಪ್ರಮಾಣ ಶೇ.73 ಹೆಚ್ವಿಸಲು ತಿದ್ದುಪಡಿ ತರಲಿ, ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರಕಾರವೇ ಇದೆಯಲ್ಲ. ಮೀಸಲಾತಿ ಹೆಸರಲ್ಲಿ ಪಾದಯಾತ್ರೆ, ಸಮಾವೇಶ,ಶಕ್ತಿ ಪ್ರದರ್ಶನ, ಸರಕಾರಕ್ಕೆ ಧಕ್ಕೆ ತರುವ ಬೆದರಿಕೆ ಹಾಕುವ ಯತ್ನಗಳು ನಡೆಯುತ್ತಿದೆ, ಇದು ಸರಿಯಲ್ಲ" ಎಂದರು.
ಇನ್ನು "ಮೀಸಲಾತಿ ವಿಚಾರದಲ್ಲಿ ಸಂಪುಟ ಸಭೆಯಲ್ಲಿ ತೀರ್ಮಾದ ಮೂಲಕ ಎಲ್ಲರಿಗೂ ನ್ಯಾಯ ಒದಗಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದು, ಇದು ಸಾಧ್ಯವೇ ಎಂಬುದನ್ನು ಮುಖ್ಯಮಂತ್ರಿಯವರೇ ಸ್ಪಷ್ಟ ಪಡಿಸಲಿ" ಎಂದು ಒತ್ತಾಯಿಸಿದ್ದಾರೆ.