ಕಾನ್ಪುರ, ಫೆ.17 (DaijiworldNrews/HR): "ವಾರಸುದಾರರಿಲ್ಲದ 1.4 ಕೋಟಿ ನಗದು ಇದ್ದ ಬ್ಯಾಗ್ವೊಂದು ಉತ್ತರ ಪ್ರದೇಶದ ಸ್ವತಂತ್ರ ಸಂಗ್ರಾಮ್ ಸೇನಾನಿ ವಿಶೇಷ ರೈಲಿನಲ್ಲಿ ಪತ್ತೆಯಾಗಿದೆ" ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.
ಸಾಂಧರ್ಭಿಕ ಚಿತ್ರ
ದೆಹಲಿಯಿಂದ ಬಿಹಾರದ ಜಯನಗರಕ್ಕೆ ಮಂಗಳವಾರದಂದು ಬರುತ್ತಿದ್ದ ರೈಲಿನಲ್ಲಿ ಈ ಬ್ಯಾಗ್ ಪತ್ತೆಯಾಗಿದೆ ಎಂದು ರೈಲ್ವೆ ಇಲಾಖೆಯ ಉಪ ಮುಖ್ಯ ಸಂಚಾರ ವ್ಯವಸ್ಥಾಪಕ ಹಿಮಾಂಶು ಶೇಖರ್ ಮಾಹಿತಿ ನೀಡಿದ್ದಾರೆ.
ಇನ್ನು "ಕೆಂಪು ಬಣ್ಣದ ಟ್ರೋಲಿ ಬ್ಯಾಗ್ ಅನ್ನು ರೈಲಿನ ಆಹಾರ ಪೂರೈಕೆ ಸಿಬ್ಬಂದಿ ಗುರುತಿಸಿದ್ದು, ಈ ಕುರಿತ ಮಾಹಿತಿಯನ್ನು ಅವರು ರೈಲ್ವೆ ಇಲಾಖೆಯ ಅಧಿಕಾರಿಗಳಿಗೆ ನೀಡಿದ್ದಾರೆ. ಬಳಿಕ ಈ ಬ್ಯಾಗ್ ಅನ್ನು ರೈಲ್ವೆ ಸಂರಕ್ಷಣಾ ಪಡೆ (ಆರ್ಪಿಎಫ್) ಮತ್ತು ಸರ್ಕಾರಿ ರೈಲ್ವೆ ಪೊಲೀಸರ (ಜಿಆರ್ಪಿ) ವಶಕ್ಕೆ ನೀಡಲಾಯಿತು. ಅವರು ರೈಲ್ವೆ ವಾಣಿಜ್ಯ ವಿಭಾಗದ ಅಧಿಕಾರಿಗಳ ಸಮ್ಮುಖದಲ್ಲಿ ಬ್ಯಾಗನ್ನು ತೆರೆದು ಪರಿಶೀಲಿಸಿದರು. ಬ್ಯಾಗಿನ ತುಂಬ ಕರೆನ್ಸಿ ನೋಟುಗಳಿದ್ದವು" ಎಂದು ತಿಳಿಸಿದ್ದಾರೆ.