ಮುಂಬೈ, ಫೆ.17 (DaijiworldNews/MB) : ಟೂಲ್ ಕಿಟ್ ಪ್ರಕರಣಕ್ಕೆ ಸಂಬಂಧಿಸಿ ಬಾಂಬೆ ಹೈಕೋರ್ಟ್ ಮುಂಬೈ ಮೂಲದ ವಕೀಲೆ ನಿಕಿತಾ ಜೇಕಬ್ಗೆ ಪ್ರಯಾಣ ಉದ್ದೇಶಿತ ನಿರೀಕ್ಷಣಾ ಜಾಮೀನು ನೀಡಿದೆ.
ಜಾಮೀನು ಕೋರಿ ನಿಕಿತಾ ಅರ್ಜಿ ಸಲ್ಲಿಸಿದ್ದು ಬಾಂಬೆ ಹೈಕೋರ್ಟ್ ಮೂರು ವಾರಗಳ ಪ್ರಯಾಣ ಉದ್ದೇಶಿತ ಜಾಮೀನು ನೀಡಿದೆ.
ಒಂದು ವೇಳೆ ಬಂಧಿಸಲ್ಪಟ್ಟರೆ 25,000 ರೂ. ವೈಯಕ್ತಿಕ ಬಾಂಡ್ ಹಾಗೂ ಅಷ್ಟೇ ಮೊತ್ತದ ಶ್ಯೂರಿಟಿ ಮೇರೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಕೂಡಾ ತಿಳಿಸಿದೆ.
ದೆಹಲಿ ಪೊಲೀಸರು ಟೂಲ್ ಕಿಟ್ ಪ್ರಕರಣದ ತನಿಖೆ ನಡೆಸುತ್ತಿದ್ದು ಪೊಲೀಸರ ಶಂಕಿತ ವ್ಯಕ್ತಿಗಳ ಪೈಕಿ ನಿಕಿತಾ ಕೂಡ ಒಬ್ಬರಾಗಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿ ಕಳೆದ ವಾರ ಪರಿಸರ ಹೋರಾಟಗಾರ್ತಿ 21ರ ಹರೆಯದ ದಿಶಾ ರವಿಯನ್ನು ಪೊಲೀಸರು ಬಂಧಿಸಿದ್ದರು. ನಿಕಿತಾ ಜೇಕಬ್ ಹಾಗೂ ಇಂಜಿನಿಯರ್ ಶಂತನು ಮುಲುಕ್ ವಿರುದ್ಧ ಜಾಮೀನುರಹಿತ ವಾರಂಟ್ನ್ನು ಹೊರಡಿಸಲಾಗಿತ್ತು.