ನವದೆಹಲಿ, ಫೆ.17 (DaijiworldNews/MB) : ಪೆಟ್ರೋಲ್, ಡೀಸೆಲ್ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆ ಇಂಧನದ ಮೇಲಿನ ಮೋದಿ ತೆರಿಗೆಯನ್ನು ವಾಪಸ್ ಪಡೆಯುವಂತೆ ಕಾಂಗ್ರೆಸ್ ಒತ್ತಾಯಿಸಿದೆ.
ಕಾಂಗ್ರೆಸ್ ವಕ್ತಾರ ಪವನ್ ಕೇರಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ''ಕಳೆದ ಆರು ವರ್ಷಗಳಿಂದ ಹೆಚ್ಚುವರಿ ಹೊರೆಯಾಗಿ ಇಂಧನದ ಮೇಲೆ ಮೋದಿ ಟ್ಯಾಕ್ಸ್ ವಿಧಿಸಲಾಗುತ್ತಿದೆ'' ಎಂದು ಟೀಕಿಸಿದ್ದಾರೆ.
''ಈ ಮೋದಿ ಟ್ಯಾಕ್ಸ್ನಿಂದಾಗಿ ಗ್ರಾಹಕರಿಗೆ ಗ್ರಾಹಕನ ಮೇಲೆ ಪ್ರತಿ ಲೀಟರ್ ಪೆಟ್ರೋಲ್ ಗೆ 23.78 ಲೀಟರ್ ಹಾಗೂ ಡಿಸೇಲ್ ಗೆ 28.37 ರು ಹೆಚ್ಚುವರಿ ಹೊರೆಯಾಗುತ್ತಿದೆ'' ಎಂದು ಹೇಳಿದ್ದಾರೆ.
''ಕೇಂದ್ರ ಸರ್ಕಾರವು ಕಳೆದ ಆರು ವರ್ಷ ಮತ್ತು ಎಂಟು ತಿಂಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಹೆಚ್ಚುವರಿ ಅಬಕಾರಿ ಸುಂಕ ವಿಧಿಸಿ ಜನರಿಂದ 20 ಸಾವಿರ ಕೋಟಿ ರೂ. ಲೂಟಿ ಮಾಡಿದೆ'' ಎಂದು ದೂರಿದ್ದಾರೆ.