ನವದೆಹಲಿ, ಫೆ.17 (DaijiworldNrews/HR): ಬ್ರೆಜ್ಹಿಲ್ ಹಾಗೂ ದಕ್ಷಿಣ ಆಫ್ರಿಕಾದಿಂದ ರೂಪಾಂತರಿ ಕೊರೊನಾ ವೈರಾಣು ಭಾರತಕ್ಕೆ ಬಂದಿರುವುದನ್ನು ಭಾರತೀಯ ಔಷಧ ಸಂಶೋಧನಾ ಘಟಕ ದೃಢಪಡಿಸಿದ ಬೆನ್ನಿಗೆ ಇದೀಗ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, "ಕೇಂದ್ರ ಸರ್ಕಾರ ಕೊರೊನಾ ಬಗ್ಗೆ ತುಂಬಾ ನಿರ್ಲಕ್ಷ್ಯ ವಹಿಸುತ್ತಿದ್ದು, ಓವರ್ ಕಾನ್ಫಿಡೆನ್ಸ್ ತೋರಿಸುತ್ತಿದೆ. ಆದರೇ ಕೊರೊನಾ ಸಮಸ್ಯೆ ಇನ್ನೂ ಮುಗಿದಿಲ್ಲ" ಎಂದರು.
ಇನ್ನು "ಜನವರಿಯಲ್ಲಿ ದಕ್ಷಿಣ ಆಫ್ರಿಕಾದ ರೂಪಾಂತರಿ SARS-CoV-2 ಹೊಂದಿರುವ ನಾಲ್ವರನ್ನು ಪತ್ತೆ ಹಚ್ಚಲಾಗಿದ್ದು, ಬ್ರೆಜ್ಹಿಲ್ ನಿಂದ ಭಾರತಕ್ಕೆ ಮರಳಿದ ಓರ್ವರಿಗೆ ಸೋಂಕು ದೃಢಪಟ್ಟಿದ್ದು, ಅವರ ಸಂಪರ್ಕಕ್ಕೆ ಬಂದಿರುವವರನ್ನು ಪತ್ತೆ ಹಚ್ಚುವ ಕಾರ್ಯ ಹಾಗೂ ಅವರನ್ನು ಪರೀಕ್ಷೆಗೆ ಒಳಪಡಿಸುವ ಕಾರ್ಯ ಮಾಡಲಾಗುತ್ತದೆ" ಎಂದು ಐಸಿಎಮ್ಆರ್ನ ನಿರ್ದೇಶಕ ಡಾ. ಬಲರಾಮ್ ಭಾರ್ಗವ್ ತಿಳಿಸಿದ್ದಾರೆ.