ಹರ್ಯಾಣ, ಫೆ.16 (DaijiworldNews/MB) : ಹಿಸಾರ್ನಲ್ಲಿರುವ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಮನೆಯಲ್ಲಿ ಆಭರಣ, ಪರವಾನಗಿ ಪಡೆದ ಗನ್, 10 ಲಕ್ಷ ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಚಂಡೀಗಢದಲ್ಲಿದ್ದಾಗ ಕಳ್ಳತನ ನಡೆದಿದೆ ಎಂದು ಎಂ.ಎಸ್. ಫೋಗಾಟ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ.
ಮನೆಯಲ್ಲಿ ಸಿಸಿಟಿವಿ ಕ್ಯಾಮೆರಾಗಳಿದ್ದರೂ, ಕಳ್ಳರು ಈ ಕಳ್ಳತನ ನಡೆಸಿದ ದೃಶ್ಯದ ಡಿಜಿಟಲ್ ವಿಡಿಯೋ ರೆಕಾರ್ಡರ್ (ಡಿವಿಆರ್) ಅನ್ನು ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳ್ಳತನ ಪ್ರಕರಣದ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಸುಖ್ಜಿತ್ ತಿಳಿಸಿದ್ದಾರೆ.
ಫೆಬ್ರವರಿ 9 ರಂದು ತನ್ನ ಮನೆಗೆ ಬೀಗ ಹಾಕಿ ಚಂಡೀಗಢಕ್ಕೆ ಹೋಗಿದ್ದೆ ಎಂದು ಸೋನಾಲಿ ಫೋಗಾಟ್ ತನ್ನ ದೂರಿನಲ್ಲಿ ತಿಳಿಸಿದ್ದಾರೆ. ಫೆಬ್ರವರಿ 15 ರಂದು ಅವರು ಹಿಸಾರ್ಗೆ ಹಿಂದಿರುಗಿದಾಗ ಬೀಗ ಮುರಿದಿರುವುದು ಗಮನಕ್ಕೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿನ್ನ ಮತ್ತು ಬೆಳ್ಳಿ ಪಾತ್ರೆ, ಬೆಳ್ಳಿ ಮಡಕೆ, 10 ಲಕ್ಷ ನಗದು, ಆಭರಣ, ಪರವಾನಗಿ ಪಡೆದ ಪಿಸ್ತೂಲ್ ಮತ್ತು ಎಂಟು ಕಾರ್ಟಿಜ್ಗಳು ಮನೆಯಿಂದ ಕಾಣೆಯಾಗಿವೆ ಎಂದು ಹೇಳಿದ್ದಾರೆ.