ಲಖನೌ, ಫೆ.16 (DaijiworldNews/HR): "ಭಾರತದ ಮಹಾನ್ ಯೋಧರು ಮತ್ತು ನಾಯಕರನ್ನು ಗೌರವಿಸದ ಹಿಂದಿನ ಸರ್ಕಾರಗಳ ತಪ್ಪುಗಳನ್ನು ನಮ್ಮ ಬಿಜೆಪಿ ಸರ್ಕಾರ ಸರಿಪಡಿಸುತ್ತಿದೆ" ಎಂದು ಪ್ರದಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಈ ಕುರಿತು ಉತ್ತರಪ್ರದೇಶದ ಬಹ್ರೇಚ್ನಲ್ಲಿ ಶ್ರಾವಸ್ತಿಯ ಪರಾಕ್ರಮಿ ರಾಜ ಸುಹೆಲ್ದೇವ್ ಅವರ ಪ್ರತಿಮೆಗೆ ವಿಡಿಯೊ ಕಾನ್ಫರೆನ್ಸ್ ಮೂಲಕ ಶಂಕುಸ್ಥಾಪನೆ ನೆರವೇರಿಸಿ ಬಳಿಕ ಮಾತನಾಡಿದ ಅವರು, "ಮಹಾನ್ ನಾಯಕರಾದ ನೇತಾಜಿ ಸುಭಾಷ್ ಚಂದ್ರ ಬೋಸ್, ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಬಿ.ಆರ್.ಅಂಬೇಡ್ಕರ್ ಅವರಿಗೂ ಸಲ್ಲಬೇಕಾದ ಗೌರವವನ್ನು ಹಿಂದಿನ ಸರ್ಕಾರಗಳು ನೀಡಿಲ್ಲ. ಆದರೆ ನಮ್ಮ ಸರ್ಕಾರ ಆ ತಪ್ಪುಗಳನ್ನೂ ಸರಿಪಡಿಸುತ್ತಿದೆ" ಎಂದರು.
ಇನ್ನು "ಕೊರೊನಾ ರೋಗವನ್ನು ನಿಭಾಯಿಸಲು ಮತ್ತು ರಾಜ್ಯವನ್ನು ಅಭಿವೃದ್ಧಿಯ ಹಾದಿಯಲ್ಲಿ ನಡೆಸಲು ಉತ್ತರ ಪ್ರದೇಶ ಸರ್ಕಾರ ಉತ್ತಮ ಪ್ರಯತ್ನಗಳನ್ನು ಮಾಡುತ್ತಿದೆ" ಎಂದು ಅವರು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಭಾಗವಹಿಸಿದ್ದರು.