ಬೆಂಗಳೂರು, ಫೆ.16 (DaijiworldNews/MB) : ತನ್ನ ಪುತ್ರನ ಹೆಸರಲ್ಲಿ ಇದ್ದ ಟಿಕೆಟ್ನಲ್ಲಿ ತಾನು ಕೊಚ್ಚಿನ್ಗೆ ತೆರಳುವ ಯತ್ನ ಮಾಡಿದ ವ್ಯಕ್ತಿಯನ್ನು ಸೋಮವಾರ ಕೆಂಪೆಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್ಎಫ್ ಸಿಬ್ಬಂದಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಅಬ್ದುಲ್ ಕಲಾಂ ಮೊಂದಾಲ್ ಬೆಳಿಗ್ಗೆ 8 ಗಂಟೆಯ ಮುನ್ನಾ ಏರ್ ಏಷ್ಯಾ ವಿಮಾನ ಏರಲಿದ್ದರು. ವಿಮಾನವು ಬೆಳಿಗ್ಗೆ 9.05 ಕ್ಕೆ ಹೊರಡಲಿತ್ತು. ಈ ವೇಳೆ ಐಡಿ ಪ್ರೋಫ್ಗಾಗಿ ಸಿಐಎಸ್ಎಫ್ ಅಧಿಕಾರಿ ಪ್ರಯಾಣಿಕರ ಟಿಕೆಟ್ ಮತ್ತು ಆಧಾರ್ ಕಾರ್ಡ್ ಅನ್ನು ಪರಿಶೀಲಿಸಿದಾಗ ಶಂಕೆ ಉಂಟಾಗಿದ್ದು ಆಧಾರ್ ಕಾರ್ಡ್ ಸಂಪೂರ್ಣವಾಗಿ ಪರಿಶೀಲನೆ ನಡೆಸಿದ್ದಾರೆ. ಆಧಾರ್ ಕಾರ್ಡ್ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ ಸೋನಾತಿಕುರಿ ಎಂಬ ವಿಳಾಸ ಹೊಂದಿದ್ದು ಇದ್ರೀಶ್ ಮೊಂದಾಲ್ ಹೆಸರಿನಲ್ಲಿತ್ತು. ಆದರೆ ಪ್ರಯಾಣ ದಾಖಲೆಗಳು ಆಧಾರ್ನಲ್ಲಿ ಕೆಲ ವ್ಯಸ್ತಾಸಗಳಿದ್ದವು. ಈ ಬಗ್ಗೆ ವಿಚಾರಿಸಿದ ಸಂದರ್ಭ ಅವರು ತನ್ನ ನಿಜವಾದ ಹೆಸರಿನ ಮತ್ತೊಂದು ಆಧಾರ್ ಕಾರ್ಡ್ನ್ನು ತೋರಿಸಿದ್ದಾರೆ. ಅಷ್ಟೇ ಅಲ್ಲದೇ ತಾನು ಇದ್ರಿಶ್ ಅವರ ತಂದೆ ಎಂದು ಕೂಡಾ ಹೇಳಿದ್ದಾನೆ ಎಂದು ವರದಿಯಾಗಿದೆ. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಸಿದಾಗ ಪ್ರಯಾಣಿಕ ತಾನು ತನ್ನ ಮಗನ ಹೆಸರಿನಲ್ಲಿ ಟಿಕೆಟ್ ಕಾಯ್ದಿರಿಸಿ ಪ್ರಯಾಣ ಬೆಳೆಸಲು ತೀರ್ಮಾನಿಸಿದ್ದಾಗಿ ಹೇಳಿದ್ದಾರೆ.
ಪ್ರಸ್ತುತ ಆತನನ್ನು ವಿಮಾನ ನಿಲ್ದಾಣ ಪೊಲೀಸರಿಗೆ ಹಸ್ತಾಂತರ ಮಾಡಲಾಗಿದೆ. ಈ ಹಿಂದೆ ಜನವರಿ 30 ರಂದು ಇದೇ ರೀತಿಯ ಘಟನೆ ವರದಿಯಾಗಿದೆ.