ಬೆಂಗಳೂರು, ಫೆ.16 (DaijiworldNews/HR): ಮನೆಯಲ್ಲಿ ಫ್ರಿಡ್ಜ್, ಬೈಕ್, ಟಿವಿ ಇದ್ದಲ್ಲಿ ಬಿಪಿಎಲ್ ಪಡಿತರ ಚೀಟಿ ರದ್ದು ಮಾಡಲಾಗುವುದು ಎಂಬ ಸಚಿವ ಉಮೇಶ್ ಕತ್ತಿ ಅವರ ಹೇಳಿಕೆಗೆ ರೇಣುಕಾಚಾರ್ಯ ಆಕ್ಷೇಪ ವ್ಯಕ್ತಪಡಿಸಿದ್ದು, "ಈ ಹೇಳಿಕೆ ಅವರದೋ ಅಥವಾ ಯಾವ ಐಎಎಸ್ ಅಧಿಕಾರಿ ಲಾಬಿಯೋ ಗೊತ್ತಿಲ್ಲ" ಎಂದು ಹೇಳಿದ್ದಾರೆ.
ಇ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನಮ್ಮದು ಎಲ್ಲ ವರ್ಗದ ಸರ್ಕಾರ, ಈ ವಿಚಾರದ ಬಗ್ಗೆ ಜಾರಿ ಆದೇಶವೇ ಆಗಿಲ್ಲ. ನಕಲಿ ಕಾರ್ಡ್ ಗಳ ಬಗ್ಗೆ ತನಿಖೆ ಮಾಡಿ ರದ್ದು ಮಾಡಲಿ. ಆದರೆ ಇಂತಹ ದ್ವಂದ್ವ ಹೇಳಿಕೆ ನೀಡಬಾರದು. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತದೆ" ಎಂದರು.
ಇನ್ನು "ಕೆಲವು ಖಾಸಗಿ ಬ್ಯಾಂಕ್ ಗಳು ಡಿಪಾಸಿಟ್ ಇಲ್ಲದೆ ಬೈಕ್ ಕೊಡುತ್ತಾರೆ, ಬಡವರು ಮನರಂಜನೆಗೋಸ್ಕರ ಟಿವಿ ಇಡುತ್ತಾರೆ. ಮಹಿಳೆಯರು ಒತ್ತಡ ಕಳೆಯಲು ಟಿವಿ ನೋಡುತ್ತಾರೆ. ನಾವು ಫ್ರಿಡ್ಜ್, ಟಿವಿ ಇಡಬಹುದು, ಬಡವರು ಟಿವಿ ಫ್ರಿಡ್ಜ್ ಇಡಬಾರದಾ"? ಎಂದು ಪ್ರಶ್ನಿಸಿದ್ದಾರೆ.