ಬೆಂಗಳೂರು, ಫೆ.16 (DaijiworldNews/HR): "ಫೆಬ್ರವರಿ 20ರಂದು ಕರ್ನಾಟಕದ 227 ಕಡೆ 'ಹಳ್ಳಿ ಕಡೆ ನಡೆಯಿರಿ' ಕಾರ್ಯಕ್ರಮ ನಡೆಯಲಿದ್ದು, ಹಳ್ಳಿಗಳಿಗೆ ತಹಶೀಲ್ದಾರ್, ಉಪ ವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ಭೇಟಿ ನೀಡಿ ಜನರ ಕಷ್ಟಸುಖ ಆಲಿಸಲಿದ್ದಾರೆ" ಎಂದು ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ಈ ಕುರಿತು ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾತನಾಡಿದ ಅವರು, "ಜನರ ಮನೆ ಬಾಗಿಲಿಗೆ ಇಲಾಖೆ ಕರೆದೊಯ್ಯುವ ನಿಟ್ಟಿನಲ್ಲಿ ಎಲ್ಲರೂ ಪ್ರತಿ ಮೂರನೇ ಶನಿವಾರ ಹಳ್ಳಿಯಲ್ಲಿ 24 ಗಂಟೆ ಇರಬೇಕು, ಜೊತೆಗೆ ಪಿಂಚಣಿ, ಖಾತೆ ಸಹಿತ ಸಮಸ್ಯೆ ಸರಿಪಡಿಸುವುದು ಇದರ ಉದ್ದೇಶ" ಎಂದರು.
ಇನ್ನು "ದೊಡ್ಡಬಳ್ಳಾಪುರ ತಾಲ್ಲೂಕು ಹೊಸಹಳ್ಳಿ ಗ್ರಾಮದಲ್ಲಿ ನಾನು ಗ್ರಾಮ ವಾಸ್ತವ್ಯ ಮಾಡುತ್ತಿದ್ದು, ಆ ಊರಿನ ಹಾಸ್ಟೆಲ್ ನಲ್ಲಿ ರಾತ್ರಿ ಕಳೆಯುತ್ತೇನೆ. ದಿನವಿಡೀ ಗ್ರಾಮದಲ್ಲಿಯೇ ಇದ್ದು ಜನರ ಸಮಸ್ಯೆ ಆಲಿಸುತ್ತೇನೆ" ಎಂದು ಹೇಳಿದ್ದಾರೆ.