ಮಧ್ಯಪ್ರದೇಶ, ಫೆ.16 (DaijiworldNews/HR): ಸೇತುವೆ ಮೇಲಿಂದ ನಾಲೆಗೆ ಬಸ್ ಉರುಳಿಬಿದ್ದು16 ಮಹಿಳೆಯರು ಸೇರಿದಂತೆ ಒಟ್ಟು 37 ಮಂದಿ ಸಾವನ್ನಪ್ಪಿದ ಘಟನೆ ಮಧ್ಯಪ್ರದೇಶದ ಸಿಧಿ ಜಿಲ್ಲೆಯ ಪಟ್ನಾ ಗ್ರಾಮದ ಬಳಿ ನಡೆದಿದೆ.
ಸಾಂಧರ್ಭಿಕ ಚಿತ್ರ
ಘಟನೆಯಲ್ಲಿ ಏಳು ಜನ ಈಜಿಕೊಂಡು ದಡ ಸೇರಿ ಉಳಿದ 37 ಶವಗಳನ್ನು ನಾಲೆಯಿಂದ ಹೊರತೆಗೆಯಲಾಗಿದೆ ಎಂದು ರೆವಾ ವಲಯದ ಐಜಿಪಿ ಉಮೇಶ್ ಜೋಗಾ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಪ್ರಾಥಮಿಕ ವರದಿಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 8.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಬಸ್ನಲ್ಲಿ ಕನಿಷ್ಠ 44 ಮಂದಿ ಪ್ರಯಾಣಿಸುತ್ತಿದ್ದರು ಎಂದು ವರದಿಯಾಗಿದೆ.
ಇನ್ನು ಘಟನೆ ನಡೆದ ಬಳಿಕ ಏಳು ಮಂದಿ ನಾಲೆಯಲ್ಲಿ ಈಜುತ್ತಾ ದಡ ಸೇರುತ್ತಿರುವುದು ಕಾಣುತ್ತಿದ್ದು, ಉಳಿದವರು ಕಣ್ಮರೆಯಾಗಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ ಎನ್ನಲಾಗಿದೆ.