ಲಿಂಗಸುಗೂರು, ಫೆ.16 (DaijiworldNews/MB) : ಸೋಲನ್ನು ಅನುಭವಿಸಿದ್ದ ತಂಡದವರು ರಾಜಕೀಯ ದ್ವೇಷದಿಂದಾಗಿ ಸದಸ್ಯೆಯ ಪುತ್ರನ ಮೇಲೆ ಹಲ್ಲೆ ನಡೆಸಿ ಹತ್ಯೆಗೈದ ಘಟನೆ ಲಿಂಗಸುಗೂರು ತಾಲ್ಲೂಕಿನ ಗಡದನಾಳ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ ಎಂದು ವರದಿಯಾಗಿದೆ.
ನೂತನವಾಗಿ ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿದ್ದ ಹಣಮಂತಮ್ಮ ಅವರ ಪುತ್ರ ಶರಣಬಸವ (35) ಹತ್ಯೆಯಾದವರು ಎಂದು ಹೇಳಲಾಗಿದೆ.
ಹಣಮಂತಮ್ಮ ಅವರು ನೀಡಿದ ದೂರಿನ ಆಧಾರದಂತೆ ಗಡದನಾಳ ಗ್ರಾಮದ ಜಗದೀಶ ಶರಣಪ್ಪ, ಯಮಬೂರ ಅಮರಪ್ಪ, ಮಹಾಂಕಾಳೆಪ್ಪ ಅಮರಪ್ಪ, ಬಸವರಾಜ ಶರಣಪ್ಪ, ಹನುಮಂತಿ ಅಮರಪ್ಪ, ದುರುಗಪ್ಪ ನಿಂಗಪ್ಪ, ಶರಣಬಸವ ಮಾನಪ್ಪ, ಕೆಂಚವ್ವ ಮಾನಪ್ಪ, ಯಲ್ಲವ್ವ ನಿಂಗಪ್ಪ, ನಿಂಗಪ್ಪ ಅಮರಪ್ಪ ವಿರುದ್ಧ ಲಿಂಗಸುಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.