ಶ್ರೀನಗರ, ಫೆ.16 (DaijiworldNews/PY): "2020ರಲ್ಲಿ ಬಂಡಿಪೋರಾದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಮಂಡಳಿಯ ಚುನಾವಣೆಯ ಸಂದರ್ಭ ನಡೆದ ರ್ಯಾಲಿಯಲ್ಲಿ ದ್ವೇಷ ಭಾಷಣ ಮಾಡಿದ ಆರೋಪದ ಹಿನ್ನೆಲೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ನಾಯಕ ಹಿಲಾಲ್ ಲೋನೆ ಅವರನ್ನು ಬಂಧಿಸಲಾಗಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೋರ್ವ ಮಂಗಳವಾರ ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
"ಇಲ್ಲಿನ ಶಾಸಕರ ಹಾಸ್ಟೆಲ್ನಿಂದ ಎನ್ಸಿ ಸಂಸತ್ ಸದಸ್ಯ ಮೊಹಮ್ಮದ್ ಅಕ್ಬರ್ ಲೋನೆ ಅವರ ಪುತ್ರ ಹಿಲಾಲ್ ಲೋನೆ ಅವರನ್ನು ಬಂಧಿಸಲಾಗಿದೆ"ಎಂದು ತಿಳಿಸಿದ್ದಾರೆ.
ಮೊಹಮ್ಮದ್ ಅಕ್ಬರ್ ಲೋನೆ ವಿರುದ್ದ ಉತ್ತರ ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ಹಾಜಿನ್ನಲ್ಲಿರುವ ಪೊಲೀಸ್ ಠಾಣೆಯಲ್ಲಿ ಕಾನೂನುಬಾಹಿರ ಚಟುವಟಿಕೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವು, ಬಂಡಿಪೋರಾದಲ್ಲಿ ನಡೆದ ಜಿಲ್ಲಾ ಅಭಿವೃದ್ದಿ ಮಂಡಳಿಯ ಚುನಾವಣೆಯ ಸಂದರ್ಭ ನಡೆದ ರ್ಯಾಲಿಯಲ್ಲಿ ಹಿಲಾಲ್ ಲೋನೆ ಅವರು ಮಾಡಿದ ಭಾಷಣಕ್ಕೆ ಸಂಬಂಧಪಟ್ಟಿದೆ.
2020ರ ಡಿ.25 ರಂದು ಹಿಲಾಲ್ ಲೋನೆ ಅವರನ್ನು ಬಂಡಿಪೋರಾದ ಸುಂಬಲ್ ಪ್ರದೇಶದಲ್ಲಿ ಬಂಧಿಸಿ ಬಳಿಕ ಶಾಸಕರ ಹಾಸ್ಟೆಲ್ ಸ್ಥಳಾಂತರಿಸಲಾಗಿತ್ತು.