ತಪೋವನ, ಫೆ.16 (DaijiworldNews/PY): ಚಮೋಲಿ ಜಿಲ್ಲೆಯಲ್ಲಿ ನಿರ್ಗಲ್ಲು ಕುಸಿತದ ಪರಿಣಾಮ ಉಂಟಾದ ಪ್ರವಾಹದಲ್ಲಿ ಸಿಲುಕಿದ್ದವರ ಪತ್ತೆ ಕಾರ್ಯ ಹತ್ತನೇ ದಿನವೂ ಮುಂದುವರೆದಿದ್ದು, ಮಂಗಳವಾರ ಎರಡು ಶವಗಳನ್ನು ಹೊರ ತೆಗೆಯಲಾಗಿದೆ.
ಇದರೊಂದಿಗೆ ದುರಂತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 58ಕ್ಕೆ ಏರಿಕೆಯಾಗಿದ್ದು, ಇನ್ನೂ 146 ಮಂದಿ ಕಣ್ಮರೆಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ತಪೋವನ-ವಿಷ್ಣುಗಡ್ ಯೋಜನೆಯ ಸುರಂಗದಲ್ಲಿ ಈವರೆಗೆ 11 ಶವಗಳು ಪತ್ತೆಯಾಗಿವೆ.
ತಪೋವನ ಸುರಂಗವನ್ನು ಕೇಂದ್ರಿಕರಿಸಿ ವಿವಿಧ ಏಜೆನ್ಸಿಗಳ ರಕ್ಷಣಾ ಕಾರ್ಯ ಮುಂದುವರೆಸಿದ್ದು, ಅಲ್ಲಿ 30 ಮಂದಿ ಕಾರ್ಮಿಕರು ಸಿಕ್ಕಿಬಿದ್ದರಬಹುದು ಎನ್ನಲಾಗಿದೆ.
ಎನ್ಡಿಆರ್ಎಫ್ ಸೇರಿದಂತೆ ಇಂಡೊ-ಟಿಬೆಟಿಯನ್ ಬಾರ್ಡರ್ ಪೊಲೀಸ್, ಎಸ್ಡಿಆರ್ಎಫ್ ತಪೋವನ ವ್ಯಾಪ್ತಿಯಲ್ಲಿ ಪರಿಹಾರ ಕಾರ್ಯಾಚರಣೆ ಕೈಗೊಂಡಿವೆ.