ನವದೆಹಲಿ, ಫೆ.16 (DaijiworldNews/PY): ದೆಹಲಿ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು 74ನೇ ರೈಸಿಂಗ್ ಡೇ ಪ್ರಯುಕ್ತ ಶುಭ ಕೋರಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬಗಳಿಗೆ 74ನೇ ರೈಸಿಂಗ್ ಡೇ ಶುಭ ಸಂದರ್ಭ ನನ್ನ ಹೃದಯಪೂರ್ವಕ ಧನ್ಯವಾದಗಳು. ಅವರ ಸ್ಥೈರ್ಯ ಹಾಗೂ ಧೈರ್ಯಗಳಿಗೆ ಮೆಚ್ಚುತ್ತೇನೆ. ದೆಹಲಿಯ ಪ್ರತಿಕೂಲದ ವೇಳೆಯಲ್ಲೂ ಅತ್ಯುತ್ತಮವಾದ ಸುರಕ್ಷತಾ ಕಾರ್ಯಗಳನ್ನು ಬದ್ದತೆಯಿಂದ ನೆರವೇರಿಸಿದ್ದೀರಿ. ರಾಜಧಾನಿಯ ಸುರಕ್ಷತೆಗಾಗಿ ಶ್ರಮಪಟ್ಟಿರುವ ಅವರಿಗೆ ನನ್ನ ನಮಸ್ಕಾರಗಳು" ಎಂದು ತಿಳಿಸಿದ್ದಾರೆ.