ಗೋರಖ್ಪುರ, ಫೆ.16 (DaijiworldNews/PY): "ಉತ್ತರಪ್ರದೇಶದಲ್ಲಿ ಅಂತರ್ ಧರ್ಮೀಯ ವ್ಯಕ್ತಿಯ ಜೊತೆ ಸಂಬಂಧಹೊಂದಿದ್ದಕ್ಕಾಗಿ ಮಹಿಳೆಯೋರ್ವಳನ್ನು ಆಕೆಯ ಕುಟುಂಬದ ಸದಸ್ಯರೇ ಜೀವಂತ ಸುಟ್ಟುಹಾಕಿದ್ದಾರೆ" ಎಂದು ಪೊಲೀಸರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಪೊಲೀಸರ ಪ್ರಕಾರ, "ಮುಸ್ಲಿಂ ವ್ಯಕ್ತಿಯ ಜೊತೆ ಸಂಬಂಧ ಹೊಂದಿದ್ದ ಕಾರಣ ಮಹಿಳೆಯ ಕುಟುಂಬರು ಕೋಪಗೊಂಡಿದ್ದು, ಆಕೆಯನ್ನು ಹತ್ಯೆ ಮಾಡಲು ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿ ಎಂಬಾತನನ್ನು ನೇಮಿಸಿ 1.5 ಲಕ್ಷ ನೀಡಿತ್ತು" ಎಂದು ಪೊಲೀಸರು ಹೇಳಿದ್ದಾರೆ.
"ಘಟನೆಯ ಸಂಬಂಧ ಮಹಿಳೆಯ ತಂದೆ ಕೈಲಾಶ್ ಯಾದವ್, ಅಣ್ಣ ಅಜಿತ್ ಯಾದವ್, ಮಾವ ಸತ್ಯಪ್ರಕಾಶ್ ಯಾದವ್ ಹಾಗೂ ಸೀತಾರಾಮ್ ಯಾದವ್ ಎನ್ನುವವರನ್ನು ಬಂಧಿಸಲಾಗಿದ್ದು, ಕೃತ್ಯಕ್ಕೆ ಬಳಸಲಾಗಿದ್ದ ಪೆಟ್ರೋಲ್ ಕಂಟೈನರ್ ಹಾಗೂ ಮೋಟಾರ್ ಸೈಕಲ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಕಾಂಟ್ರಾಕ್ಟ್ ಕಿಲ್ಲರ್ ವರುಣ್ ತಿವಾರಿ ಎಂಬಾತನ ಹುಡುಕಾಡ ನಡೆಯುತ್ತಿದೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸೂಪರಿಂಟೆಂಡೆಂಟ್ ಆಫ್ ಪೊಲೀಸ್, "ಧಂಗಾಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಜಿಗಿನಾ ಗ್ರಾಮದಲ್ಲಿ ಫೆ.4ರಂದು ಯುವತಿಯ ಅರ್ಧ ಸುಟ್ಟ ಶವ ಪತ್ತೆಯಾಗಿತ್ತು. ಸ್ಥಳೀಯ ಪೊಲೀಸರು, ಸಿಸಿಟಿವಿ ದೃಶ್ಯಾವಳಿ, ಕ್ಷೇತ್ರ ಘಟಕ ಹಾಗೂ ಶ್ವಾನ ದಳದ ಸಹಾಯದಿಂದ ಶವವನ್ನು ಗೋರಖ್ಪುರದ ಬೆಲ್ಘಾಟ್ ಪ್ರದೇಶದ ರಂಜನಾ ಯಾದವ್ ಎಂದು ಗುರುತು ಪತ್ತೆ ಮಾಡಲಾಯಿತು" ಎಂದು ಹೇಳಿದ್ದಾರೆ.
ಸಂತ್ರಸ್ತೆಯ ತಂದೆ ಪೊಲೀಸರ ಜೊತೆ ನೀಡಿದ ಮಾಹಿತಿಯ ಪ್ರಕಾರ, "ನನ್ನ ಮಗಳು ಮುಸ್ಲಿಂ ವ್ಯಕ್ತಿಯೊಂದಿಗೆ ಸಂಬಂಧಹೊಂದಿದ್ದಳು. ಆಕೆ ಪ್ರೇಮಿಯನ್ನು ಬಿಡಲು ತಯಾರಿಲ್ಲದ ಸಂದರ್ಭ, ಆತ ತನ್ನ ಮಗ ಹಾಗೂ ಅಳಿಯನ ಜೊತೆ ಸೇರಿ ಮಾಹಿಲಿಯಿಂದ ಗುತ್ತಿಗೆ ಕೊಲೆಗಾರನನ್ನು ನೇಮಿಸಿಕೊಂಡಿದ್ದಾಗಿ" ಹೇಳಿದ್ದಾರೆ.
ಪೊಲೀಸರ ಪ್ರಕಾರ, "ಆರೋಪಿಗಳ ಪೈಕಿ ಓರ್ವ ಫೆ.3ರಂದು ಜಿಗಿನಾ ಗ್ರಾಮದ ನಿರ್ಜನ ಸ್ಥಳಕ್ಕೆ ಮೋಟಾರ್ ಸೈಕಲ್ನಲ್ಲಿ ಯುವತಿಯನ್ನು ಕರೆದೊಯ್ದಿದ್ದಾರೆ. ಈ ಸಂದರ್ಭ ಇತರ ಆರೋಪಿಗಳು ಅವರ ಜೊತೆ ಸೇರಿ ಮಹಿಳೆಯ ಕೈ ಹಾಗೂ ಬಾಯಿಯನ್ನು ಕಟ್ಟಿದ್ದಾರೆ. ಬಳಿಕ ಮಹಿಳೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ" ಎಂದು ತಿಳಿಸಿದ್ದಾರೆ.