ಮುಂಬೈ, ಫೆ.16 (DaijiworldNews/HR): ದಿವಂಗತ ನಟ ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಎಂ.ಎಸ್.ಧೋನಿ ಸಿನಿಮಾದಲ್ಲಿ ನಟಿಸಿದ್ದ ಸಂದೀಪ್ ನಾಹರ್(30) ಸೋಮವಾರ ಮುಂಬೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಟ ಸಂದೀಪ್ ನಾಹರ್ ಆತ್ಮಹತ್ಯೆಗು ಮುನ್ನ ಫೇಸ್ಬುಕ್ನಲ್ಲಿ ಸುದೀರ್ಘ ಬರಹದ ಪೋಸ್ಟ್ ಮತ್ತು ವಿಡಿಯೊ ಹಂಚಿಕೊಂಡಿದ್ದು, ಪೋಸ್ಟ್ ಪ್ರಕಾರ ಅವರು ವೈಯಕ್ತಿಕ ಮತ್ತು ವೃತ್ತಿಗೆ ಸಂಬಂಧಿಸಿದಂತೆ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎನಾಲಾಗಿದೆ.
ಇನ್ನು ಆತ್ಮಹತ್ಯೆಗೆ ಸುಮಾರು ಮೂರು ಗಂಟೆಗೂ ಮುನ್ನ ಈ ವಿಡಿಯೊ ಪೋಸ್ಟ್ ಮಾಡಿರಬಹುದೆಂದು ಪೊಲೀಸರು ತಿಳಿಸಿರುವುದಾಗಿ ವರದಿಯಾಗಿದೆ.
ನಾಹರ್ ಮುಂಬೈ ಉಪನಗರದ ಗೋರೆಗಾಂನಲ್ಲಿರುವ ಪ್ಲ್ಯಾಟ್ನಲ್ಲಿ ರಾತ್ರಿ ಪ್ರಜ್ಞೆ ಕಳೆದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಪತ್ನಿ ಕಾಂಚನ್ ಮತ್ತು ಸ್ನೇಹಿತರು ಎಸ್ವಿಆರ್ ಆಸ್ಪತ್ರೆಗೆ ಸಾಗಿಸಿದರು. ಆದರೆ ಆಸ್ಪತ್ರೆಗೆ ತರುವ ಮುನ್ನವೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.