ಬೆಂಗಳೂರು, ಫೆ.16 (DaijiworldNews/MB) : ''ಖಾಸಗೀಕರಣವೆಂಬ ಷಡ್ಯಂತ್ರದ ಹಿಂದಿನ ಮೆದುಳೇ ಆರ್ಎಸ್ಎಸ್'' ಎಂದು ಕಾಂಗ್ರೆಸ್ ವಕ್ತಾರ ದಿನೇಶ್ ಗುಂಡೂರಾವ್ ಆರೋಪಿಸಿದ್ದಾರೆ.
ಬ್ಯಾಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಮಹಾರಾಷ್ಟ್ರ, ಇಂಡಿಯನ್ ಓವರ್ಸೀಸ್ ಬ್ಯಾಂಕ್ ಹಾಗೂ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಖಾಸಗೀಕರಣವಾಗಲಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿರುವುದಾಗಿ ಮಾಧ್ಯಮ ವರದಿ ಮಾಡಿದೆ.
ಈ ವರದಿಯನ್ನು ಉಲ್ಲೇಖಿಸಿ ಟ್ವೀಟ್ ಮಾಡಿರುವ ಗುಂಡೂರಾವ್ ಅವರು, ''ಜನರು ಸಾರ್ವಜನಿಕ ಸಂಸ್ಥೆಗಳ ಖಾಸಗೀಕರಣದ ಹಿಂದಿನ ಉದ್ದೇಶ ಅರಿತುಕೊಳ್ಳಬೇಕು. ಲಾಭದಲ್ಲೇ ನಡೆಯುತ್ತಿರುವ 4 ಬ್ಯಾಂಕ್ಗಳನ್ನು ಖಾಸಗೀಕರಣಗೊಳಿಸುವ ಅಗತ್ಯವಿತ್ತೆ?'' ಎಂದು ಪ್ರಶ್ನಿಸಿದ್ದು, ''ಸರ್ಕಾರ ಹಂತ ಹಂತವಾಗಿ ಎಲ್ಲಾ ಸಾರ್ವಜನಿಕ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವ ಪ್ರಯತ್ನದಲ್ಲಿದೆ. ಖಾಸಗೀಕರಣವೆಂಬುದು ಅತಿ ದೊಡ್ಡ ಷಡ್ಯಂತ್ರ. ಈ ಷಡ್ಯಂತ್ರದ ಹಿಂದಿನ ಮೆದುಳೇ ಆರ್ಎಸ್ಎಸ್'' ಎಂದು ದೂರಿದ್ದಾರೆ.