ಬೆಂಗಳೂರು, ಫೆ.16 (DaijiworldNews/PY): ಮಾಜಿ ರಾಜ್ಯಸಭಾ ಸದಸ್ಯ, ಗವರ್ನರ್, ನಿವೃತ್ತ ನ್ಯಾಯಮೂರ್ತಿ ಎಂ ರಾಮ ಜೋಯಿಸ್ (89) ಅವರು ಮಂಗಳವಾರ ಮುಂಜಾನೆ ನಿಧನರಾದರು.
ರಾಮ ಜೋಯಿಸ್ ಅವರು ಮಂಗಳವಾರ ಬೆಳಗ್ಗೆ 7.30ರ ವೇಳೆಗೆ ನಿಧನರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಇವರು ರಾಜ್ಯಸಭೆಯ ಸದಸ್ಯರಾಗಿ ಹಾಗೂ ಜಾರ್ಖಂಡ್ ಹಾಗೂ ಬಿಹಾರ ರಾಜ್ಯಗಳ ರಾಜ್ಯಪಾಲರಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೇ, ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿಯೂ ಸೇವೆ ಸಲ್ಲಿಸಿದ್ದರು.
ಜೋಯಿಸ್ ಅವರು 1932ರ ಜುಲೈ 27ರಂದು ಶಿವಮೊಗ್ಗ ಜಿಲ್ಲೆಯ ಅರಗ ಗ್ರಾಮದಲ್ಲಿ ಜನಿಸಿದ್ದರು.