ಬೆಂಗಳೂರು, ಫೆ.16 (DaijiworldNews/HR): ಸತತ ಎಂಟನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆಯಾಗಿದ್ದು, ಮಂಗಳವಾರ ದೇಶದಲ್ಲಿ ಇಂಧನ ಬೆಲೆ ಗರಿಷ್ಠ ಮಟ್ಟ ತಲುಪಿದೆ ಎನ್ನಲಾಗಿದೆ.
ಬೆಂಗಳೂರಿನಲ್ಲಿ ಇಂದು ಪ್ರತಿ ಲೀಟರ್ ಪೆಟ್ರೋಲ್ಗೆ 92.82 ಹಾಗೂ ಲೀಟರ್ ಡೀಸೆಲ್ಗೆ 84.49 ಏರಿಕೆಯಾಗಿದೆ.
ಇನ್ನು ಮುಂಬೈನಲ್ಲಿ ಪೆಟ್ರೋಲ್ ದರ 96 ರೂಪಾಯಿ ಸಮೀಪದಲ್ಲಿದ್ದು, ವಾಣಿಜ್ಯ ನಗರಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ 95.75, ಡೀಸೆಲ್ ಬೆಲೆ ₹86.72 ಮುಟ್ಟಿದೆ. ದೆಹಲಿಯಲ್ಲಿ ಲೀಟರ್ ಪೆಟ್ರೋಲ್ಗೆ 30 ಪೈಸೆ ಏರಿಕೆಯಾಗಿ 89.29 ಮತ್ತು ಡೀಸೆಲ್ 35 ಪೈಸೆ ಹೆಚ್ಚಳವಾಗಿ 79.70 ಆಗಿದೆ.
ಫೆಬ್ರುವರಿ 9ರಿಂದ ತೈಲ ಬೆಲೆ ಏರಿಕೆಯಾಗುತ್ತಿದ್ದು, ಎಂಟು ದಿನಗಳಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 2.34 ಮತ್ತು ಡೀಸೆಲ್ ದರ 2.57ರಷ್ಟು ಏರಿಕೆಯಾಗಿದೆ.