ಬೆಂಗಳೂರು, ಫೆ.16 (DaijiworldNews/PY): ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಸಿಎಂ ಬಿ.ಎಸ್. ಯಡಿಯೂರಪ್ಪ ಅವರನ್ನು ರಾಜೀನಾಮೆ ನೀಡಿವಂತೆ ಒತ್ತಾಯಿಸಿದ್ದು, "ನಿಮ್ಮ ಸರ್ಕಾರದ ವಿರುದ್ದ ಪ್ರತಿದಿನ ಹಲವಾರು ಆರೋಪಗಳು ಕೇಳಿಬರುತ್ತಿದ್ದು, ನಿಮಗೆ ರಾಜ್ಯದ ಹಿತಾಸಕ್ತಿಯ ಕುರಿತು ಕಾಳಜಿ ಇದ್ದರೆ, ದಯಮಾಡಿ ರಾಜೀನಾಮೆ ನೀಡಿ ರಾಜ್ಯದ ಮಾನ ಉಳಿಸಿ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸುರ್ಜೇವಾಲಾ ಅವರು, "ಮಾನ್ಯ ಯಡಿಯೂರಪ್ಪನವರೇ, ನಿಮ್ಮದೇ ಪಕ್ಷದ ಶಾಸಕ, 42 ಐಎಎಸ್ ಅಧಿಕಾರಗಳ ವರ್ಗಾವಣೆಯಲ್ಲಿ ಕೋಟ್ಯಾಂತ ರೂ.ಗಳ ಹೋಲ್ ಸೇಲ್ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದ್ದಾರೆ. ಇಂತಹ ಆರೋಪಗಳು ಪ್ರತಿದಿನ ನಿಮ್ಮ ಸರ್ಕಾರದ ವಿರುದ್ದ ಕೇಳಿಬರುತ್ತಲೇ ಇವೆ. ನಿಮಗೆ ರಾಜ್ಯದ ಹಿತಾಸಕ್ತಿಯ ಕುರಿತು ಕಾಳಜಿ ಇದ್ದರೆ, ದಯಮಾಡಿ ರಾಜೀನಾಮೆ ನೀಡಿ ರಾಜ್ಯದ ಮಾನ ಉಳಿಸಿ" ಎಂದು ತಿಳಿಸಿದ್ದಾರೆ.