ಕೋಲ್ಕತ್ತ,ಫೆ.15 (DaijiworldNews/HR): ಪಶ್ಚಿಮ ಬಂಗಾಳದಲ್ಲಿ ಬಡವರಿಗೆ 5ರೂಪಾಯಿಗೆ ಊಟ ದೊರೆಯಲಿದ್ದು, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಡವರಿಗೆ 'ಮಾ' ಯೋಜನೆಗೆ ಸೋಮವಾರ ವಿಡಿಯೊ ಮೂಲಕ ಚಾಲನೆ ನೀಡಿದ್ದಾರೆ.
ಚಾಲನೆ ನೀಡಿದ ಬಳಿಕ ಈ ಕುರಿತು ಮಾತನಾಡಿದ ಅವರು, "ಒಂದು ಪ್ಲೇಟ್ ಅನ್ನ, ಬೇಳೆ, ತರಕಾರಿ ಮತ್ತು ಮೊಟ್ಟೆ ಸಾಂಬಾರ್ 5ರೂಪಾಯಿಗೆ ನೀಡಲಿದ್ದು, ಪ್ರತಿ ಪ್ಲೇಟ್ ಊಟಕ್ಕೆ ರಾಜ್ಯ ಸರ್ಕಾರ 15ರೂ. ಸಬ್ಸಿಡಿ ಮೊತ್ತವನ್ನು ಭರಿಸಲಿದೆ" ಎಂದು ತಿಳಿಸಿದ್ದಾರೆ.
ಇನ್ನು "'ಮಾ' ಯೋಜನೆಯ ಅಡುಗೆ ಮನೆಗಳನ್ನು ಸ್ವಸಹಾಯ ಶಕ್ತಿ ಗುಂಪುಗಳು ನಿರ್ವಹಿಸಲಿದ್ದು, ಪ್ರತಿ ದಿನ ಮಧ್ಯಾಹ್ನ 1ರಿಂದ 3 ಗಂಟೆಯವರೆಗೆ ಊಟವನ್ನು ನೀಡಲಾಗುತ್ತದೆ. ರಾಜ್ಯದ ಎಲ್ಲ ಕಡೆಯೂ 'ಮಾ' ಯೋಜನೆಯ ಅಡುಗೆ ಮನೆಗಳನ್ನು ಆರಂಭಿಸಲಾಗುವುದು" ಎಂದು ಹೇಳಿದ್ದಾರೆ.