ಲಕ್ನೊ,ಫೆ.15 (DaijiworldNews/HR): "ಕಬ್ಬು ಬೆಳೆಗಾರರ ಬಾಕಿ ಪಾವತಿಸಲು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ಹಣವಿಲ್ಲ, ಆದರೆ ವಿಶ್ವ ಪ್ರವಾಸ ಮಾಡಲು ಎರಡು ವಿಮಾನಗಳನ್ನು ಖರೀದಿಸಲು ಅವರಲ್ಲಿ ಹಣವಿದೆ" ಎಂದು ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ.
ಈ ಕುರಿತು ಕಿಸಾನ್ ಮಹಾಸಭಾದಲ್ಲಿ ಮಾತನಾಡಿದ ಅವರು, "ದೇಶದ ರೈತರ ಕಬ್ಬಿನ 15 ಸಾವಿರ ಕೋಟಿಯನ್ನು ಬಾಕಿ ಉಳಿಸಿಕೊಂಡು, ಇನ್ನೂ ಪಾವತಿಸುತ್ತಿಲ್ಲ. ಆದರೆ ಮೋದಿಯವರ ವಿಶ್ವ ಪ್ರವಾಸಕ್ಕೆ ಸುಮಾರು 16 ಸಾವಿರ ಕೋಟಿ ಮೊತ್ತದ ಎರಡು ವಿಮಾನಗಳನ್ನು ಸರ್ಕಾರ ಖರೀದಿಸಿದೆ. ಕಳೆದ ಎರಡು ಚುನಾವಣೆಗಳಲ್ಲಿ ಮೋದಿಯವರು ಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸುತ್ತಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು "ಪ್ರಧಾನಿ ಮೋದಿಯವರು ನೀಡಿದ ಭರವಸೆಗಳನ್ನು ನಂಬಿದ ದೇಶದ ಜನತೆ ಅವರನ್ನು ಎರಡು ಬಾರಿ ಬೆಂಬಲಿಸಿದರು. ಆದರೆ, ಮೋದಿಜೀಯವರು ಜನತೆಯ ನಂಬಿಕೆಯನ್ನು ಹುಸಿಗೊಳಿಸಿಬಿಟ್ಟರು" ಎಂದು ದೂರಿದ್ದಾರೆ.