ರಾಮನಗರ, ಫೆ.15(DaijiworldNews/PY): "ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರು ರಾಜ್ಯ ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಿಲ್ಲ" ಎಂದು ಪಶು ಸಂಗೋಪನೆ ಸಚಿವ ಪ್ರಭು ಚವಾಣ್ ಹೇಳಿದರು.
ಸೋಮವಾರ ಸುದ್ದಿಗೋಷ್ಠಯಲ್ಲಿ ಮಾತನಾಡಿದ ಅವರು, "ಸಚಿವರು ಹಾಗೂ ಶಾಸಕರಿಗೆ ತಮಗೆ ಬೇಕಾದ್ದನ್ನು ಕೇಳಿ ಪಡೆಯುವ ಹಕ್ಕಿದೆ. ಆದರೆ, ಈ ವಿಚಾರದ ಬಗ್ಗೆ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಯಾರೊಬ್ಬರೂ ಸಿಎಂ ಹಾಗೂ ವಿಜಯೇಂದ್ರ ಅವರ ವಿರುದ್ದ ಹೇಳಿಕೆ ನೀಡಬಾರದು" ಎಂದು ತಿಳಿಸಿದರು.
"ಮೃಗಾಲಯದ ಪ್ರಾಣಿಗಳಿಗೆ ಗೋಹತ್ಯೆ ನಿಷೇಧದಿಂದ ಆಹಾರದ ಕೊರತೆ ಆಗಿರುವ ಬಗ್ಗೆ ಮೃಗಾಲಯ ಪ್ರಾಧಿಕಾರದ ಅಧಿಕಾರಿಗಳು ಇಲಾಖೆಯ ಗಮನಕ್ಕೆ ತಂದಿಲ್ಲ. ಕಾಯ್ದೆಯಲ್ಲಿ 13 ವರ್ಷ ಮೇಲ್ಪಟ್ಟ ಕೋಣ ಹಾಗೂ ಎಮ್ಮೆಗಳ ವಧೆಗೆ ಅವಕಾಶ ಕಲ್ಪಿಸಲಾಗಿದೆ" ಎಂದು ಹೇಳಿದರು.