ಅಹಮದಾಬಾದ್, ಫೆ.15(DaijiworldNews/PY): ಗುಜರಾತ್ ಸಿಎಂ ವಿಜಯ ರೂಪಾಣಿ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ ಎಂದು ಯು.ಎನ್.ಮೆಹ್ತಾ ಆಸ್ಪತ್ರೆ ತಿಳಿಸಿದೆ.
ರವಿವಾರ ವಿಜಯ ರೂಪಾಣಿ ಅವರ ಮಾದರಿಯನ್ನು ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿದ್ದು, ಅವರಿಗೆ ಕೊರೊನಾ ಸೋಂಕು ದೃಢಪಟ್ಟಿರುವುದು ತಿಳಿದುಬಂದಿದೆ ಎಂದು ಆಸ್ಪತ್ರೆ ಸೋಮವಾರ ತಿಳಿಸಿದೆ.
ರವಿವಾರ ವಡೋದರ ನಿಜಾಂಪುರದಲ್ಲಿ ಸ್ಥಳೀಯ ಸಂಸ್ಥೆಯ ಚುನಾವಣೆಯ ಸಮಾವೇಶದಲ್ಲಿ ಅವರು ಭಾಷಣ ಮಾಡುತ್ತಿದ್ದ ಸಂದರ್ಭವಿಜಯ ರೂಪಾಣಿ ಅವರು ಕುಸಿದು ಬಿದ್ದಿದ್ದರು. ಅವರನ್ನು ಕೂಡಲೇ ಅವರನ್ನು ಅಹಮದಾಬಾದ್ಗೆ ಕರೆದೊಯ್ದು ಯು.ಎನ್. ಆಸ್ಪತ್ರೆಗೆ ದಾಖಲಿಸಲಾಗಿತ್ತು.