ವಿಜಯಪುರ, ಫೆ.15(DaijiworldNews/PY): "ಸಿಎಂ ಬಿ.ಎಸ್. ಯಡಿಯೂರಪ್ಪ ಅವರಿಗೆ ಅವರ ಕುಟುಂಬದವರೇ ಹಾವು, ಚೇಳಾಗಿ ತೊಂದರೆ ನೀಡುತ್ತಿದ್ದಾರೆ" ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸಿಎಂ ಬಿಎಸ್ವೈ ಅವರಿಗೆ ಮುಕ್ತವಾಗಿ ಅವರ ಕಾರ್ಯಗಳನ್ನು ಮಾಡಲು ವಿಜಯೇಂದ್ರನೇ ಬಿಡುತ್ತಿಲ್ಲ" ಎಂದಿದ್ದಾರೆ.
"ಅವರ ಪರಿಸರದವರೇ ಸಿಎಂ ಯಡಿಯೂರಪ್ಪ ಅವರ ಹೆಸರು ಕೆಡಿಸುತ್ತಿದ್ದಾರೆ. ಆಡಳಿತದಲ್ಲಿ ವಿಜಯೇಂದ್ರ ಹಸ್ತಕ್ಷೇಪ ಮಾಡುತ್ತಿರುವ ಕಾರಣದಿಂದ ಸಿಎಂ ಅವರು ಬದಲಾಗಿದ್ದಾರೆ" ಎಂದು ತಿಳಿಸಿದ್ದಾರೆ.
"ತಮಗಾಗದವರ ವಿರುದ್ದ ಅಪಪ್ರಚಾರ ಮಾಡಲು ವಿಜಯೇಂದ್ರ ಅವರ ಬಳಿ ನಕಲಿ ಸಿಡಿ ತಯಾರಿಸುವ ದೊಡ್ಡ ಕೇಂದ್ರವೇ ಇದೆ" ಎಂದು ಆರೋಪಿಸಿದ್ದಾರೆ.
"ಇತ್ತೀಚೆಗೆ ಸಿಎ ಬಿಎಸ್ವೈ ಅವರ ಕುಟುಂಬ ಮಾರಿಷಸ್ಗೆ ವಿಮಾನದಲ್ಲಿ ತೆರಳಿದ್ದು ಏಕೆ?. ಅಲ್ಲಿ ಏನಾದರೂ ಹಣದ ವ್ಯವಹಾರ ಇದೆಯೇ?. ಈ ವಿಚಾರ ರಾಜ್ಯದ ಜನತೆ ತಿಳಿಯಬೇಕು" ಎಂದು ಒತ್ತಾಯಿಸಿದ್ದಾರೆ.