ನವೆದಹಲಿ, ಫೆ.15(DaijiworldNews/PY): ಅಡುಗೆ ಅನಿಲ ಬೆಲೆ ಏರಿಕೆಯನ್ನು ಬಲವಾಗಿ ಖಂಡಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, "ಜನಸಾಮಾನ್ಯರನ್ನು ಕೇಂದ್ರ ಸರ್ಕಾರ ಲೂಟಿ ಮಾಡುತ್ತಿದೆ" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "ಕೇಂದ್ರ ಸರ್ಕಾರ ಸಾರ್ವಜನಿಕರಿಂದ ಲೂಟಿ ಮಾಡುತ್ತಿದೆ. ಕೇವಲ ಇಬ್ಬರ ಅಭಿವೃದ್ದಿ ಮಾತ್ರ" ಎಂದು ವಾಗ್ದಾಳಿ ನಡೆಸಿದ್ದಾರೆ.
ಫೆ.14ರ ರವಿವಾರದಂದು ಅಡುಗೆ ಅನಿಲ ಪ್ರತೀ ಸಿಲಿಂಡರ್ ದರದಲ್ಲಿ 50 ಏರಿಕೆಯಾಗಿತ್ತು. ದೇಶಾದ್ಯಂತ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆಯಾಗುತ್ತಲೇ ಇದ್ದು, ಇದರ ಬೆನ್ನಲ್ಲೇ ಅಡುಗೆ ಅನಿಲ ಬೆಲೆಯೂ ಕೂಡಾ ಏರಿಕೆಯಾಗಿದೆ.
"ನೂತನ ಕೃಷಿ ಕಾಯ್ದೆ ಮೂಲಕ ಪ್ರಧಾನಿ ಮೋದಿ ಅವರು ದೇಶದ ಸಂಪತ್ತನ್ನು ತಮ್ಮ ಉದ್ಯಮ ಮಿತ್ರರಿಗೆ ಹಂಚಲು ಮುಕ್ತವಾದ ಮಾರ್ಗವನ್ನು ಕಲ್ಪಿಸುತ್ತಿದ್ದಾರೆ" ಎಂದು ಇದಕ್ಕೂ ಮುನ್ನ ರಾಹುಲ್ ಗಾಂಧಿ ಆರೋಪಿಸಿದ್ದರು.