ದಾವಣಗೆರೆ, ಫೆ.14 (DaijiworldNews/MB) : ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಅವರು ಹೊಗಳಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸೂರಗೊಂಡನಕೊಪ್ಪದಲ್ಲಿ ನಡೆಯುತ್ತಿದ್ದ ಸಂತ ಸೇವಲಾಲ್ ಜಯಂತಿಯ ಸಂದರ್ಭ ಮಾತನಾಡಿದ ಅವರು ಸಿದ್ದರಾಮಯ್ಯನವರ ಜೊತೆಗಿನ ತನ್ನ ಭಾಂದವ್ಯದ ಬಗ್ಗೆ ಹೇಳಿದರು.
''ಅಧಿವೇಶನ ಮುಗಿದ ಮೇಲೆ ಟೀ ಕುಡಿಯುವ ಸಂದರ್ಭ ಸಿದ್ದರಾಮಯ್ಯನವರು ಬಂದು ಎಲ್ಲಾದರೂ ಇರೂ ಎಂತಾದರೂ ನೀ ಮಂತ್ರಿಯಾಗಿರು ಎಂದು ಹೇಳುತ್ತಾರೆ. ಹಾಗೆಯೇ ಇಷ್ಟೆಲ್ಲಾ ಓಡಾಡುತ್ತೀಯಾ ಮಂತ್ರಿನೇ ಆಗಿಲ್ಲವಲ್ಲೋ ಎಂದು ಪ್ರೀತಿಯಿಂದ ಕಾಲೆಳೆಯುತ್ತಾರೆ'' ಎಂದು ಹೇಳಿದ್ದಾರೆ.
ಹಾಗೆಯೇ, ''ಸಿದ್ದರಾಮಯ್ಯ ಅವರ ಭಾಷಣಕ್ಕೆ ನಾನು ಕಾತರನಾಗಿದ್ದೇನೆ'' ಎಂದು ಕೂಡಾ ಹೇಳಿದ್ದಾರೆ.