ಬೆಂಗಳೂರು, ಫೆ.14 (DaijiworldNews/MB) : ಸತತ ಏಳನೇ ದಿನವೂ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ದರ 30 ಪೈಸೆ ಹಾಗೂ ಡೀಸೆಲ್ ದರ 34 ಪೈಸೆ ಹೆಚ್ಚಾಗಿದ್ದು, ಪೆಟ್ರೋಲ್, ಡಿಸೇಲ್ ಬೆಲೆ ಕ್ರಮವಾಗಿ 91.70, 83.81ಕ್ಕೆ ಏರಿಕೆಯಾಗಿದೆ.
ಏಳು ದಿನಗಳಲ್ಲಿ ಪೆಟ್ರೋಲ್ ದರ ಒಂದು ಲೀಟರಿಗೆ 1.54 ಹಾಗೂ ಡೀಸೆಲ್ ದರ ಒಂದು ಲೀಟರಿಗೆ 2.05ರಷ್ಟು ಏರಿಕೆಯಾಗಿದೆ.
ರಾಜಸ್ತಾನದ ಶ್ರೀಗಂಗಾನಗರದಲ್ಲಿ ಪೆಟ್ರೋಲ್ ದರ ಲೀಟರಿಗೆ 99.29ಕ್ಕೆ ಏರಿಕೆಯಾಗಿದೆ. ಡೀಸೆಲ್ 91.17 ಕ್ಕೆ ಏರಿದೆ.