ಜಮ್ಮು, ಫೆ.14 (DaijiworldNews/MB) : ಜಮ್ಮು ಬಸ್ ನಿಲ್ದಾಣದಿಂದ ಏಳು ಕಿಲೋಗ್ರಾಂಗಳಷ್ಟು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಪೊಲೀಸರು ರವಿವಾರ ವಶಪಡಿಸಿಕೊಂಡಿದ್ದು ಬಳಿಕ ದೊಡ್ಡ ದುರಂತವನ್ನು ತಪ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದರಿಂದಾಗಿ, 2019 ರ ಪುಲ್ವಾಮಾ ದಾಳಿಯ ಎರಡನೇ ವರ್ಷದ ಸಂದರ್ಭ ನಡೆಯಲಿದ್ದ ಭಾರೀ ಸ್ಫೋಟವನ್ನು ತಪ್ಪಿಸಲಾಗಿದೆ.
ಭಯೋತ್ಪಾದಕರು ಭಯೋತ್ಪಾದಕ ದಾಳಿ ನಡೆಸುತ್ತಾರೆ ಎಂಬ ಮಾಹಿತಿಯು ಇದ್ದುದರಿಂದ, ಭದ್ರತಾ ಪಡೆಗಳು ಸಾಕಷ್ಟು ಭದ್ರತಾ ಕ್ರಮಗಳನ್ನು ಕೈಗೊಂಡಿದೆ.
"ಇದು ಒಂದು ದೊಡ್ಡ ಐಇಡಿ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ಜಮ್ಮು ನಗರದಲ್ಲಿ ಬಸ್ ನಿಲ್ದಾಣದಲ್ಲಿ ದಿನನಿತ್ಯ ನೂರಾರು ಜನರು ಇರುತ್ತದೆ. ಹೆಚ್ಚುವರಿ ಪಡೆಗಳು ಸ್ಥಳಕ್ಕೆ ತಲುಪಿವೆ ಮತ್ತು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ.
2019 ರಲ್ಲಿ ನಡೆದ ಪುಲ್ವಾಮ ದಾಳಿಯಲ್ಲಿ 40 ಸಿಆರ್ಪಿಎಫ್ ಜವಾನರು ಹುತಾತ್ಮರಾಗಿದ್ದರು.