ಡೆಹ್ರಾಡೂನ್, ಫೆ. 14 (DaijiworldNews/HR): ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ಹಿಮಪಾತ ಪ್ರವಾಹದ ತೀವ್ರತೆ ಸಿಲುಕಿದ್ದ ರೈನಿ ವಿದ್ಯುತ್ ಯೋಜನೆ ಸ್ಥಳದಿಂದ ಭಾನುವಾರ ಎಂಟು ಶವಗಳನ್ನು ಹೊರತೆಗೆಯಲಾಗಿದೆ ಎಂದು ತಿಳಿದು ಬಂದಿದೆ.
ಮೃತಪಟ್ಟವರ ಸಂಖ್ಯೆ 46ಕ್ಕೆ ಏರಿಯಾಗಿದ್ದು, ಇನ್ನೂ 158 ಮಂದಿ ನಾಪತ್ತೆಯಾಗಿದ್ದು, ಅವರಿಗಾಗಿ ಶೋಧ ಹಾಗೂ ಸಿಲುಕಿಕೊಂಡವರ ರಕ್ಷಣೆಗಾಗಿ ಕಾರ್ಯಾಚರಣೆ ಪ್ರಕ್ರಿಯೆ ಮುಂದುವರಿದಿದೆ ಎನ್ನಲಾಗಿದೆ.
ತಪೋವನ್ ಬಳಿ ನಿರ್ಮಿಸಲಾಗಿರುವ ತಾತ್ಕಾಲಿಕ ಶವಾಗಾರದಲ್ಲಿ ಮೃತದೇಹಗಳನ್ನು ಇಡಲಾಗಿದ್ದು, ಮೃತರ ಪೈಕಿ ಇಬ್ಬರ ಗುರುತು ಪತ್ತೆಯಾಗಿದೆ. ಒಬ್ಬರು ಟೆಹ್ರಿ ಜಿಲ್ಲೆಯ ನರೇಂದ್ರ ನಗರ ನಿವಾಸಿಯಾಗಿದ್ದರೆ, ಮತ್ತೊಬ್ಬರು ಡೆಹ್ರಾಡೂನ್ನ ಕಾಲ್ಸಿ ನಿವಾಸಿ ಎಂದು ಜಿಲ್ಲಾಧಿಕಾರಿ ಸ್ವಾತಿ ಎಸ್.ಭಡೌರಿಯಾ ತಿಳಿಸಿದ್ದಾರೆ.
ಇನ್ನು "ಮುಂಜಾಗ್ರತೆಯಾಗಿ ತುರ್ತು ವೈದ್ಯಕೀಯ ಸೌಲಭ್ಯ ಕಲ್ಪಿಸಲು ಆಗುವಂತೆ ಸ್ಥಳದಲ್ಲಿ ಹೆಲಿಕಾಪ್ಟರ್ ಅನ್ನು ಇರಿಸಲಾಗಿದೆ" ಎಂದು ಮಾಹಿತಿ ನೀಡಿದ್ದಾರೆ.