ಭೋಪಾಲ್, ಫೆ.14 (DaijiworldNews/PY): "ಮಾಜಿ ಕೇಂದ್ರ ಸಚಿವ ಸುಷ್ಮಾ ಸ್ವರಾಜ್ ಅವರ ಪ್ರತಿಮೆಯನ್ನು ಮಧ್ಯಪ್ರದೇಶದ ವಿದಿಶಾದಲ್ಲಿ ನಿರ್ಮಾಣ ಮಾಡಲಾಗುವುದು" ಎಂದು ಸಿಎಂ ಶಿವರಾಜ್ ಸಿಂಗ್ ಚೌಹಾಣ್ ಹೇಳಿದರು.
ರವಿವಾರ ಶಿವರಾಜ್ ಸಿಂಗ್ ಚೌಹಾಣ್ ಅವರು ಸುಷ್ಮಾ ಸ್ವರಾಜ್ ಅವರ ಜನ್ಮ ದಿನಾಚರಣೆಯ ಅಂಗವಾಗಿ ಅವರ ನಿವಾಸಕ್ಕೆ ಭೇಟಿ ನೀಡಿದ್ದು, ಭಾವಚಿತ್ರಕ್ಕೆ ವಂದಿಸಿದ್ದಾರೆ.
ಬಳಿಕ ಮಾತನಾಡಿದ ಅವರು, "ಸುಷ್ಮಾ ಸ್ವರಾಜ್ ಅವರು ತನ್ನ ಲೋಕಸಭಾ ಕ್ಷೇತ್ರವಾದ ವಿದಿಶಾದ ಅಭಿವೃದ್ದಿಗಾಗಿ ನೀಡಿದ ಕೊಡುಗೆಯನ್ನು ಹೋಲಿಸಲಾಗದು. ಸುಷ್ಮಾ ಸ್ವರಾಜ್ ಅವರ ಪ್ರತಿಮೆಯನ್ನು ವಿದಿಶಾದ ಟೌನ್ ಹಾಲ್ನಲ್ಲಿ ನಿರ್ಮಾಣ ಮಾಡಲಾಗುವುದು" ಎಂದರು.
ಸುಷ್ಮಾ ಸ್ವರಾಜ್ ಅವರು, 2009 ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ವಿದಿಶಾ ಕ್ಷೇತ್ರದಲ್ಲಿ ಜಯ ಗಳಿಸಿದ್ದರು. 2019ರ ಆಗಸ್ಟ್ 6ರಂದು ಸುಷ್ಮಾ ಸ್ವರಾಜ್ ಅವರು ನಿಧರಾದರು.