ಚೆನ್ನೈ, ಫೆ.14 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ರವಿವಾರ ಭಾರತೀಯ ಸೇನೆಗೆ ಅರ್ಜುನ್ ಯುದ್ದ ಟ್ಯಾಂಕ್ ಅನ್ನು ಹಸ್ತಾಂತರಿಸಿದರು.
ತಮಿಳುನಾಡಿನ ಚೆನ್ನೈನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭೂ ಸೇನಾ ಮುಖ್ಯಸ್ಥ ಜನರಲ್ ಎಂ.ಎ. ನರವಾಣೆ ಅವರಿಗೆ ಪ್ರಧಾನಿ ಮೋದಿ ಅವರು ಅರ್ಜುನ್ ಯುದ್ದ ಟ್ಯಾಂಕ್ ಅನ್ನು ಹಸ್ತಾಂತರಿಸಿದರು.
ಅರ್ಜುನ್ ಯುದ್ದ ಟ್ಯಾಂಕ್ ಅನ್ನು ಯುದ್ಧ ವಾಹನ ಸಂಶೋಧನೆ ಹಾಗೂ ಅಭಿವೃದ್ಧಿ ಕೇಂದ್ರ, ಡಿಆರ್ಡಿಒ ಜಂಟಿಯಾಗಿ ದೇಶೀಯವಾಗಿ ವಿನ್ಯಾಸ, ಅಭಿವೃದ್ದಿ ಹಾಗೂ ನಿರ್ಮಾಣಗೊಂಡಿದೆ. ಅರ್ಜುನ್ ಯುದ್ದ ಟ್ಯಾಂಕ್ ನಿರ್ಮಾಣ ಕಾರ್ಯದಲ್ಲಿ 15 ಶೈಕ್ಷಣಿಕ ಸಂಸ್ಥೆಗಳು ಸೇರಿದಂತೆ ಎಂಟು ಪ್ರಯೋಗಾಲಯಗಳು ಹಾಗೂ ಹಲವು ಎಂಎಸ್ಎಂಇಗಳ ನೆರವಾಗಿದ್ದವು.
ಪ್ರಧಾನಿ ಮೋದಿ ಅವರು ತಮಿಳುನಾಡು ಹಾಗೂ ಕೇರಳ ಪ್ರವಾಸದಲ್ಲಿದ್ದು, ಹಲವು ಯೋಜನೆಗಳನ್ನು ಉದ್ಘಾಟಿಸುತ್ತಿದ್ದಾರೆ. ಅಲ್ಲದೇ, ಅವರು ಅನೇಕ ಕಾರ್ಯಕ್ರಮಗಳನ್ನು ಪಾಲ್ಗೊಳ್ಳುತ್ತಿದ್ದಾರೆ.