ನವದೆಹಲಿ, ಫೆ.14 (DaijiworldNews/PY): ಪುಲ್ವಾಮ ಜಿಲ್ಲೆಯಲ್ಲಿ 2019ರಲ್ಲಿ ನಡೆ ಭಯೋತ್ಪಾದಕೆ ದಾಳಿಯಲ್ಲಿ ಹುತಾತ್ಮರಾದ ಭದ್ರತಾ ಸಿಬ್ಬಂದಿಗಳಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೌರವ ಸಲ್ಲಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, "2019ರಲ್ಲಿ ಈ ದಿನ ಪುಲ್ವಾಮಾ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ಧೈರ್ಯಶಾಲಿ ಹುತಾತ್ಮರಿಗೆ ನಾನು ನಮಸ್ಕರಿಸುತ್ತೇನೆ. ಅವರ ಅಸಾಧಾರಣ ಧೈರ್ಯ ಹಾಗೂ ಸರ್ವೋಚ್ಚ ತ್ಯಾಗವನ್ನು ಭಾರತ ಎಂದಿಗೂ ಕೂಡಾ ಮರೆಯುವುದಿಲ್ಲ" ಎಂದಿದ್ದಾರೆ.
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ 2019ರಲ್ಲಿ ಪಾಕಿಸ್ತಾನ ಮೂಲದ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ ನಡೆಸಿದ ಭಯೋತ್ಪಾದಕ ದಾಳಿಯಲ್ಲಿ 40 ಸಿಆರ್ಪಿಎಫ್ನ ಯೋಧರು ಹುತಾತ್ಮರಾಗಿದ್ದರು.