ವಿಜಯಪುರ, ಫೆ.14 (DaijiworldNews/PY): "ಸಂವಿಧಾನದ ಆಶಯದಂತೆ ಶೋಷಿತ ಎಲ್ಲಾ ಸಮುದಾಯಗಳಿಗೂ ಕೂಡಾ ಮುಖ್ಯವಾಹಿನಿಗೆ ಬರಲು ಮೀಸಲಾತಿ ದೊರೆಯಲಿ" ಎಂದು ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ನಡೆಸುವುದು ತಪ್ಪಲ್ಲ" ಎಂದು ತಿಳಿಸಿದ್ದಾರೆ.
"ಶೈಕ್ಷಣಿಕ ಸೇರಿದಂತೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಶೋಷಿತ ಸಮುದಾಯಗಳನ್ನು ಮುಖ್ಯವಾಹಿನಿಗೆ ತರುವುದೇ ಸಂವಿಧಾನದ ಆಶಯವಾಗಿದೆ. ಎಲ್ಲಾ ಸಮುದಾಯಗಳಿಗೆ ಕೂಡಾ ಸಂವಿಧಾನದ ಆಶಯದಂತೆ ಮೀಸಲಾತಿ ಸೌಲಭ್ಯ ದೊರೆಯಲಿ" ಎಂದಿದ್ದಾರೆ.